ಬೆಂಗಳೂರು :ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸರಿಯಾದ ತನಿಖೆ ಮಾಡ್ತಿಲ್ಲ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ನಟಿಯರಷ್ಟೇ ಅಲ್ಲ, ನಟರ ಜತೆ ರಾಜಕಾರಣಿಗಳ ಮಕ್ಕಳೂ ಇದ್ದಾರೆ- ಇಂದ್ರಜಿತ್ ಲಂಕೇಶ್ - Shivraj Kumar told anushree no connection with Drug case
ನಾನು ನಿರ್ದೇಶನ ಮಾಡಿದ ಐಶ್ವರ್ಯ ಸಿನಿಮಾ ಮಾಡಬೇಕಾದ್ರೆ ಈ ಡ್ರಗ್ಸ್ ಬಗ್ಗೆ ಗೊತ್ತಿರಲಿಲ್ಲ. ಆದರೆ, ಯಾವಾಗ ಬಾಲಿವುಡ್ ನಟಿ ಅಂತಾ ಕರೆಯಿಸಿಕೊಂಡರೋ ಅಂದಿನಿಂದ ಈ ಡ್ರಗ್ಸ್ ಜಾಲದಲ್ಲಿ, ಸ್ವತಃ ದೀಪಿಕಾ ಪಡುಕೋಣೆ ಸಿಕ್ಕಿ ಹಾಕಿಕೊಂಡಿದ್ದಾರೆ..
ಪಿ.ಲಂಕೇಶ್ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು, ಯಾಕೇ ರಾಜಕಾರಣಿ ಮತ್ತು ಸ್ಟಾರ್ ನಟರನ್ನ ವಿಚಾರಣೆಗೆ ಕರೆಯುತ್ತಿಲ್ಲ ಅಂತಾ ಪ್ರಶ್ನೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ ಅಂತಾ ಹೇಳಿದ್ದರಿಂದ ನಟಿಯರು, ಡ್ರಗ್ಸ್ ಪೆಡ್ಲರ್ಸ್ ಬಂಧನವಾಗಿದೆ.
ಆದರೆ, ಸಿಸಿಬಿ ಅಧಿಕಾರಿಗಳು ಮಾತ್ರ ವಿಚಾರಣೆಯ ನಿಧಾನವಾಗಿ ಮಾಡುತ್ತಿದ್ದಾರೆ ಅಂತಾ ಇಂದ್ರಜಿತ್ ಲಂಕೇಶ್ ಹೇಳಿದ್ರು. ನಿರೂಪಕಿ ಅನುಶ್ರೀ ವಿಚಾರವಾಗಿ ಪ್ರತಿಕ್ರಿಯೆ ನೀಡದ ಇಂದ್ರಜಿತ್ ಲಂಕೇಶ್, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ನಾನು ನಿರ್ದೇಶನ ಮಾಡಿದ ಐಶ್ವರ್ಯ ಸಿನಿಮಾ ಮಾಡಬೇಕಾದ್ರೆ ಈ ಡ್ರಗ್ಸ್ ಬಗ್ಗೆ ಗೊತ್ತಿರಲಿಲ್ಲ. ಆದರೆ, ಯಾವಾಗ ಬಾಲಿವುಡ್ ನಟಿ ಅಂತಾ ಕರೆಯಿಸಿಕೊಂಡರೋ ಅಂದಿನಿಂದ ಈ ಡ್ರಗ್ಸ್ ಜಾಲದಲ್ಲಿ, ಸ್ವತಃ ದೀಪಿಕಾ ಪಡುಕೋಣೆ ಸಿಕ್ಕಿ ಹಾಕಿಕೊಂಡಿದ್ದಾರಂತೆ ಎಂದು ಇಂದ್ರಜಿತ್ ಹೇಳಿದರು.
TAGGED:
ನಟ ಶಿವರಾಜ್ ಕುಮಾರ್