ಕರ್ನಾಟಕ

karnataka

ETV Bharat / sitara

ಮಾರ್ಚ್ 12ಕ್ಕೆ ತೆರೆಗೆ ಅಪ್ಪಳಿಸಲಿದ್ದಾನೆ ಶಿವಾರ್ಜುನ - ಮೇಘನಾ ರಾಜ್​

ಚಿರು ಹಾಗೂ ಅಮೃತ ಅಯ್ಯಂಗಾರ್, ಅಕ್ಷತ ಶ್ರಿನಿವಾಸ್ ಹಾಗೂ ಅಕ್ಷತ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ 'ಶಿವಾರ್ಜು‌ನ' ಇದೇ ಮಾರ್ಚ್ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Shivarjuna Ready To Release
ಮಾರ್ಚ್ 12ಕ್ಕೆ ತೆರೆಗೆ ಅಪ್ಪಳಿಸಲಿದ್ದಾನೆ ಶಿವಾರ್ಜುನ

By

Published : Mar 3, 2020, 1:59 PM IST

ಸ್ಯಾಂಡಲ್​​​ವುಡ್​​ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪಕ್ಕಾ ಮಾಸ್ ಟ್ರೈಲರ್ ನೋಡಿ ಫಿಧಾ ಆಗಿದ್ದ ಸಿನಿ ಪ್ರಿಯರಿಗೆ ಚಿತ್ರತಂಡ ಸರ್ಪೈಸ್ ಆಗಿ ಮೆಲೋಡಿ ಸಾಂಗ್​​ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಲಾಂಚ್ ಮಾಡಿದೆ. ಇನ್ನು ಈ ಹಾಡಿಗೆ ಚಿರು ಮಡದಿ ಮೇಘನ ರಾಜ್ ಧ್ವನಿ ನೀಡಿದ್ದಾರೆ.

ಮಾರ್ಚ್ 12ಕ್ಕೆ ತೆರೆಗೆ ಅಪ್ಪಳಿಸಲಿದ್ದಾನೆ ಶಿವಾರ್ಜುನ

ಚಿರು ಹಾಗೂ ಅಮೃತ ಅಯ್ಯಂಗಾರ್, ಅಕ್ಷತ ಶ್ರಿನಿವಾಸ್ ಹಾಗೂ ಅಕ್ಷತ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ 'ಶಿವಾರ್ಜು‌ನ' ಇದೇ ಮಾರ್ಚ್ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರಕ್ಕೆ ಶಿವತೇಜಸ್ ಆಕ್ಷನ್ ಕಟ್ ಹೇಳಿದ್ದು, ಕನ್ನಡ ಚಿತ್ರರಂಗದಲ್ಲಿ ಸುಮಾರು 30ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಶಿವಾರ್ಜುನ್ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ಇನ್ನು ಈ ಚಿತ್ರದಲ್ಲಿ ತಾರ, ಕಿಶೋರ್, ಸಾಧುಕೋಕಿಲ, ಕಾಮಿಡಿ ಕಿಲಾಡಿ ನಯನ ಪ್ರಮುಖ ಪಾತ್ರ ನಿಭಾಯಿಸಿದ್ದು, ಸಾಧು ಕೋಕಿಲ ಪುತ್ರ ಸುರಾಗ್ ಕೊಕಿಲ ಶಿವಾರ್ಜುನ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸಂಚಿತ್ ಹೆಗಡೆ, ಮೇಘಾನ ರಾಜ್ ಚಿತ್ರಕ್ಕೆ ದನಿ ನೀಡಿದ್ದಾರೆ‌.

ABOUT THE AUTHOR

...view details