ಅಕ್ಟೋಬರ್ 15 ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್ಗಳು ಪುನಾರಂಭವಾಗಲಿವೆ. ಅದೇ ರೀತಿ ಕರ್ನಾಟಕದಲ್ಲೂ ಚಿತ್ರಮಂದಿರಗಳನ್ನ ತೆರೆಯೋದಿಕ್ಕೆ ಮಾಲೀಕರು ಉತ್ಸಾಹ ತೋರಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಬೇಕಿರುವುದರಿಂದ ಕೋಟಿ ಕೋಟಿ ಬಜೆಟ್ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.
ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ, ಸಿನಿಮಾ ಪ್ರಸಾರಣ ಸಂಸ್ಥೆಗಳಾದ ಯು, ಎಫ್, ಓ ಹಾಗು ಕ್ಯೂಬ್ ಸಂಸ್ಥೆಗಳ ಜೊತೆ ಫಿಲ್ಮ್ ಚೇಂಬರ್ ಒಂದು ಸಭೆ ಮಾಡಿದೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ಫಿಲ್ಮ್ ಚೇಂಬರ್ ನಿರ್ಮಾಪಕ ವಲಯದ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಮೊದಲು ಹೊಸ ಮತ್ತು ಹಳೆಯ ಸಿನಿಮಾಗಳಿಗೆ ರಿಲೀಸ್ಗೆ ಅವಕಾಶ ನೀಡಲಾಗುವುದು ಅಂತಾ ಹೇಳಿದ್ದಾರೆ. ಚಿತ್ರಮಂದಿರಗಳು ಆರಂಭವಾದಾಗ ಜನರು ಥಿಯೇಟರ್ಗಳಿಗೆ ಬರೋದಿಕ್ಕೆ ಏನು ಮಾಡಬೇಕು ಅಂತಾ ಸಿನಿಮಾ ನಿರ್ಮಾಪಕ, ವಿತರಕರು, ಹಾಗು ಚಿತ್ರಮಂದಿರದ ಮಾಲೀಕರ ಜೊತೆ ಚರ್ಚೆ ಮಾಡಲಾಗುವುದು ಎಂದರು.