ಹೊಸ ವರ್ಷ ಬಂತೆಂದರೆ ಸೆಲಬ್ರಿಟಿಗಳ ಪೋಟೋಗಳಿರುವ ಕ್ಯಾಲೆಂಡರ್ ಬಿಡುಗಡೆಯಾಗುತ್ತದೆ. ಕೆಲವು ದಿನಗಳ ಮುನ್ನವೇ ಸೆಲಬ್ರಿಟಿಗಳ ಪೋಟೋಶೂಟ್ ಮಾಡಿಸಿ ಕ್ಯಾಲೆಂಡರ್ ತಯಾರಿಸಿ ಹೊಸ ವರ್ಷಕ್ಕಾಗಿ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ ಕೂಡಾ ಸೆಲಬ್ರಿಟಿ ಕ್ಯಾಲೆಂಡರ್ ಬಿಡುಗಡೆಯಾಗಿದೆ.
ಡಾ. ರಾಜ್ಕುಮಾರ್ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಫ್ಯಾನ್ಸ್ - Shivarajumar fans revealed Dr Rajkumar family calendar
ಈ ಬಾರಿ ಡಾ. ರಾಜ್ಕುಮಾರ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರ ಪೋಟೋಗಳನ್ನು ಒಳಗೊಂಡ ವರ್ಣಮಯ, ಅಪರೂಪದ ಕ್ಯಾಲೆಂಡರನ್ನು ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಸೇನಾ ಸಮಿತಿ ಬಿಡುಗಡೆ ಮಾಡಿದೆ.
![ಡಾ. ರಾಜ್ಕುಮಾರ್ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಫ್ಯಾನ್ಸ್ Dr Rajkumar family calendar](https://etvbharatimages.akamaized.net/etvbharat/prod-images/768-512-5782047-thumbnail-3x2-calander.jpg)
ಇತ್ತೀಚಿಗಷ್ಟೇ ವಜ್ರೇಶ್ವರಿ ಕಂಬೈನ್ಸ್, ಪಿಆರ್ಕೆ ಪ್ರೊಡಕ್ಷನ್, ಪಿಆರ್ಕೆ ಆಡಿಯೋ ಅಡಿಯಲ್ಲಿ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರ ಆರು ಶೀಟ್ಗಳ ಕ್ಯಾಲೆಂಡರನ್ನು ಪುನೀತ್ ರಾಜ್ಕುಮಾರ್ ಬಿಡುಗಡೆ ಮಾಡಿದ್ದರು. ಇನ್ನು ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ವರ್ಷವೂ ಕ್ಯಾಲೆಂಡರ್ ಹೊರ ತಂದಿದ್ದಾರೆ. ಈ ಬಾರಿ ಡಾ. ರಾಜ್ಕುಮಾರ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರ ಪೋಟೋಗಳನ್ನು ಒಳಗೊಂಡ ವರ್ಣಮಯ, ಅಪರೂಪದ ಕ್ಯಾಲೆಂಡರನ್ನು ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಸೇನಾ ಸಮಿತಿ ಬಿಡುಗಡೆ ಮಾಡಿದೆ. 12 ಪುಟಗಳ 2020 ನೇ ವರ್ಷದ ಡಾ. ರಾಜ್ಕುಮಾರ್ ಕುಟುಂಬದ ಸ್ಥಿರ ಚಿತ್ರಗಳ ಕ್ಯಾಲೆಂಡರ್ ಮಾರುಕಟ್ಟೆಯಲ್ಲಿ ಕೂಡಾ ಲಭ್ಯವಿದೆ ಎಂದು ಡಾ. ಶಿವರಾಜ್ಕುಮಾರ್ ಸೇನಾ ಸಮಿತಿ ರಾಜ್ಯಾಧ್ಯಕ್ಷ ಟಿ. ನಾರಾಯಣ್ ತಿಳಿಸಿದರು.