ಈ ಹಿಂದೆಯೇ ಅಪ್ಪುವಿಗಾಗಿ ನಾನು ಒಂದು ಕಥೆ ಕೇಳಿದ್ದೆ. ಆ ಕಥೆಯಲ್ಲಿ ನನ್ನನ್ನ ಹಾಗು ಅಪ್ಪು ಅವರನ್ನ ಒಟ್ಟಿಗೆ ನೀವು ನೋಡ್ತೀರಿ. ಅದೊಂದು ಎಮೋಷನಲ್ ಸ್ಕ್ರಿಪ್ಟ್. ಇದೊಂದು ಡೆಡಿಕೇಷನ್ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ನಟ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಅನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದರು.
ಈ ವೇಳೆ ನಟ ಶಿವರಾಜ್ ಕುಮಾರ್ ಮಾತನಾಡಿ, ರಾಘವೇಂದ್ರ ರಾಜ್ ಕುಮಾರ್ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ಭಾವುಕರಾದರು.
ನಾವು ಐದು ಜನ ಮಕ್ಕಳು. ಆದ್ರೆ ಒಬ್ಬ ಇಲ್ಲವಾದ. ಇದನ್ನ ಹೇಳಿಕೊಳ್ಳೋಕೆ ಒಂಥರಾ ಬೇಸರ. ಈ ಟೈಮ್ ಬರುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ಅಪ್ಪ-ಅಮ್ಮ 100 ವರ್ಷ ಇರಬೇಕು ಅಂತ ಆಸೆ ಇತ್ತು. ಆದ್ರೆ ಅವರು ಹೋದ್ರು. ಆದ್ರೆ ಅಪ್ಪುವಿಗೆ ತುಂಬಾ ಚಿಕ್ಕ ವಯಸ್ಸು. ನಟನೆಗೂ ಮೀರಿ ಅವನ್ನಲ್ಲಿ ಮಾನವೀಯತೆ ಇವತ್ತು ಎಂದು ನೆನೆದರು.
ಓದಿ:ನಾನು ಅಪ್ಪು ಹುಡುಕಿಕೊಂಡು ಹೋಗುತ್ತೇನೆ, ಇಲ್ಲಿರೋದಕ್ಕೆ ಆಗಲ್ಲ ಎಂದು ಭಾವುಕರಾದ ರಾಘಣ್ಣ; ಗಳಗಳನೆ ಅತ್ತ ಶಿವಣ್ಣ