ಕರ್ನಾಟಕ

karnataka

ETV Bharat / sitara

ಅವಕಾಶ ಸಿಕ್ಕಿದ್ದಿದ್ರೆ ಈ ಸಿನಿಮಾಗೆ ಧ್ವನಿ ಕೊಡ್ತಿದ್ರಂತೆ ಶಿವಣ್ಣ! - ravi basruru directed girmit movie

ಗಿರ್ಮಿಟ್​ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್​​ಕುಮಾರ್, ಇಂತಹ ಒಳ್ಳೆ ಪ್ರಯತ್ನ ಕನ್ನಡದಲ್ಲಿ ಮಾಡುತ್ತಿರುವುದು ಒಳ್ಳೆಯ ವಿಚಾರ. ರವಿ ಬಸ್ರೂರು ಇಂತಹ ಚಿತ್ರ ತಂದಿರುವುದು ವಿಶೇಷವಾಗಿದೆ. ಸಿನಿಮಾಕ್ಕೆ ಯಶ್​​, ರಾಧಿಕಾ, ರಂಗಾಯಣ ರಘು ಸೇರಿದಂತೆ ಹಲವು ನಟರು ಧ್ವನಿ ನೀಡಿದ್ದಾರೆ. ನನಗೂ ಅವಕಾಶ ಸಿಕ್ಕಿದ್ದರೆ ನಾನು ಧ್ವನಿ ನೀಡುತ್ತಿದ್ದೆ ಎಂದು ಶಿವಣ್ಣ ಸಂತೋಷ ವ್ಯಕ್ತಪಡಿಸಿದ್ರು.

ಶಿವರಾಜ್​ ಕುಮಾರ್​​​

By

Published : Nov 6, 2019, 1:06 PM IST

ಕೆಜಿಎಫ್‌ ಸಿನಿಮಾ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಗಿರ್ಮಿಟ್ ಸಿನಿಮಾವನ್ನು ಮಾಡ್ತಾ ಇರೋದು ಗೊತ್ತಿರುವ ವಿಚಾರ. ಟ್ರೇಲರ್​​ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಗಿರ್ಮಿಟ್, ಮಕ್ಕಳ ಸಿನಿಮಾ ಆದ್ರೂ ಪಕ್ಕಾ ಕಮರ್ಷಿಯಲ್ ಚಿತ್ರದಂತೆ ಚಿತ್ರೀಕರಣಗೊಂಡಿದೆ.

ಈ ಬಗ್ಗೆ ಮಾತನಾಡಿದ ಸೆಂಚುರಿ ಸ್ಟಾರ್​ ಶಿವರಾಜ್​​ಕುಮಾರ್​​, ಇಂತಹ ಒಳ್ಳೆ ಪ್ರಯತ್ನ ಕನ್ನಡದಲ್ಲಿ ಮಾಡುತ್ತಿರುವುದು ಒಳ್ಳೆಯ ವಿಚಾರ. ರವಿ ಬಸ್ರೂರು ಇಂತಹ ಚಿತ್ರ ತಂದಿರುವುದು ವಿಶೇಷವಾಗಿದೆ. ಸಿನಿಮಾಕ್ಕೆ ಯಶ್​​, ರಾಧಿಕಾ, ರಂಗಾಯಣ ರಘು ಸೇರಿದಂತೆ ಹಲವು ನಟರು ಧ್ವನಿ ನೀಡಿದ್ದಾರೆ. ನನಗೂ ಅವಕಾಶ ಸಿಕ್ಕಿದ್ದರೆ ನಾನು ಧ್ವನಿ ನೀಡುತ್ತಿದ್ದೆ ಎಂದು ಶಿವಣ್ಣ ಸಂತೋಷ ವ್ಯಕ್ತಪಡಿಸಿದ್ರು.

ಶಿವಣ್ಣ ಈ ಸಿನಿಮಾಗೆ ಧ್ವನಿ ನೀಡುತ್ತಿದ್ರಂತೆ

ಇದೇ ವೇಳೆ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿರುವ ಆಶ್ಲೇಷ್ ರಾಜ್ ಹಾಗೂ ನಾಯಕಿ ಪಾತ್ರ ಮಾಡಿರೋ ಶ್ಲಾಘಾ ಸಾಲಿಗ್ರಾಮ ಸಖತ್​​​ ಡೈಲಾಗ್​ ಹೊಡೆದಿದ್ದು, ಶಿವಣ್ಣ ಡೈಲಾಗ್​ಗೆ ಫುಲ್ ಫಿದಾ ಆದ್ರು.

ಇನ್ನು ಈ ಚಿತ್ರದಲ್ಲಿ ಆಕ್ಷನ್, ಲವ್ ಎಲಿಮೆಟ್ಸ್ ಇದ್ದು, ಚಿತ್ರ ಪಕ್ಕಾ ಕಮರ್ಶಿಯಲ್​​ ಆಗಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಹೀರೋ, ಹೀರೋಯಿನ್, ಖಳ‌ನಟ ಹಾಗೂ ಸ್ನೇಹಿತರ ಪಾತ್ರಗಳನ್ನ ಮಕ್ಕಳಿಂದ ಮಾಡಿಸಲಾಗಿದೆ. ಸಿನಿಮಾ‌ದಲ್ಲಿ 280ಕ್ಕೂ ಹೆಚ್ಚು ಮಕ್ಕಳು ನಟಿಸಿದ್ದು, ಮಕ್ಕಳ ಧ್ವನಿಯಾಗಿ ಸ್ಯಾಂಡಲ್​​ವುಡ್ ​ನಟರು ಡೈಲಾಗ್​ ಹೇಳಿದ್ದಾರೆ. ಸಿನಿಮಾದ ಟ್ರೇಲರ್​ ಈಗಾಗಲೇ ಬಿಡುಗಡೆಯಾಗಿದ್ದು, ಇದೇ 8ರಂದು ಸಿನಿಮಾ ತೆರೆ ಮೇಲೆ ಕಾಣಲಿದೆ.

ABOUT THE AUTHOR

...view details