ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾ ಬಿಡುಗಡೆ ಆದ್ರೆ, ಆ ಸಿನಿಮಾ ಮತ್ತೆ ಪ್ರಸಾರ ಆಗೋದು ಟಿವಿಗಳ ಮಾತ್ರ. ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ಅಥವಾ ಎರಡು ಬಾರಿ ಸಿನಿಮಾವನ್ನ ಮತ್ತೆ ಬಿಡುಗಡೆ ಮಾಡಬಹುದು. ಆದರೆ, ಇಲ್ಲೊಂದು ಸಿನಿಮಾ ಅತಿ ಹೆಚ್ಚು ಬಾರಿ ಬಿಡುಗಡೆ ಆಗುವ ಮೂಲಕ ಹೊಸ ಅಧ್ಯಾಯ ಬರೆದಿದೆ.
ಓಂ ಸಿನಿಮಾ 1995ರಂದು ರಿಲೀಸ್ ಆಗಿ, ಕೆಲವು ದಿನಗಳ ಹಿಂದೆ ಸಿಲ್ವರ್ ಜ್ಯೂಬ್ಲಿಯನ್ನ ಆಚರಿಸಿಕೊಂಡಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಓಂ ಚಿತ್ರ, ತೆರೆಕಂಡು ಇಂದಿಗೆ ಬರೋಬ್ಬರಿ 26 ವರ್ಷಗಳು ತುಂಬಿವೆ. ಮೇ 19, 1995ರಂದು ಓಂ ತೆರೆ ಕಂಡಿತ್ತು. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಮಾಸ್ಟರ್ ಪೀಸ್ ಸಿನಿಮಾ ಓಂ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಅಭಿನಯದ, ಉಪೇಂದ್ರ ನಿರ್ದೇಶನದ ಓಂ ಸಿನಿಮಾ ಶುರುವಾಗಿದ್ದೇ ಒಂದು ಇಂಟ್ರಸ್ಟ್ರಿಂಗ್ ಕಹಾನಿ.
ಇಂದು ಕನ್ನಡ ಚಿತ್ರರಂಗದಲ್ಲಿ ಬುದ್ದಿವಂತ ನಿರ್ದೇಶಕ ಹಾಗೂ ನಟ ಅಂತಾ ಕರೆಯಿಸಿಕೊಂಡ ಉಪೇಂದ್ರ, ಕಾಲೇಜು ದಿನಗಳಲ್ಲಿ ಬರೆದ ಸ್ಕ್ರಿಪ್ಟ್ ಓಂ. ಈ ಸಿನಿಮಾ ಕಥೆ ಬರೆದಾಗ ಉಪೇಂದ್ರ ಮೊದಲಿಗೆ ನಟ ಕುಮಾರ್ ಗೋವಿಂದ್ ಹಾಕಿಕೊಂಡು ಈ ಸಿನಿಮಾ ಮಾಡಬೇಕು ಅಂದು ಕೊಂಡಿದ್ರು. ಆದರೆ, ಕೆಲವು ಕಾರಣಗಳಿಂದ ಈ ಓಂ ಸಿನಿಮಾ ಕಥೆಯನ್ನ ಶಿವರಾಜ್ ಕುಮಾರ್ಗೆ ಮಾಡಬೇಕಾದ ಕಾಲ ಕೂಡಿ ಬಂತು.
ಡಾ.ರಾಜ್ ಕುಮಾರ್ ಹಾಗೂ ಸಹೋದರ ವರದಾಜ್ ಸ್ವತಃ ಕುಳಿತು ಓಂ ಸಿನಿಮಾದ ಕಥೆಯನ್ನ ಕೇಳಿದ್ರಂತೆ. ಅಣ್ಣಾವ್ರು ಓಂ ಸಿನಿಮಾ ಕಥೆ ಕೇಳಿ ಉಪೇಂದ್ರಗೆ 5,000 ಸಾವಿರ ಅಡ್ವಾನ್ಸ್ ಹಣ ಕೊಟ್ಟು ಈ ಸಿನಿಮಾ ಕಥೆ ಮತ್ತಷ್ಟು ಬದಲಾವಣೆ ಮಾಡಿ ಅಂತಾ ಓಂಕಾರ ಹಾಕಿದ್ದರಂತೆ.
ನಷ್ಟದಲ್ಲಿದ್ದ ಇಂಡಸ್ಟ್ರಿಗೆ ಬೂಸ್ಟ್ ನೀಡಿದ್ದ ಸಿನಿಮಾ
ನಿರ್ದೇಶಕ ಉಪೇಂದ್ರ 1995ರಲ್ಲೇ ರಿಯಲ್ ಡಾನ್ಗಳನ್ನ ಇಟ್ಟುಕೊಂಡು ಓಂ ಸಿನಿಮಾ ಮಾಡಿದ್ದು, ಒಂದು ಚಾಲೆಂಜಿಂಗ್ ಆಗಿತ್ತು. ಇನ್ನು ಓಂ ಅಕ್ಷರಕ್ಕೆ ಸಂಬಂಧಪಟ್ಟಂತೆ ಸಿನಿಮಾದಲ್ಲಿ ಹಾಡು ಇಡುವ ಪ್ಲ್ಯಾನ್ ಯಾವುದು ಇರಲಿಲ್ಲ, ಆದರೆ ಅಣ್ಣಾವ್ರ ಸಲಹೆ ಮೇರೆಗೆ ಹೇ ದಿನಕರ ಹಾಡನ್ನು ಮಾಡಲಾಯಿತು.