ಚಿತ್ರೀಕರಣ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ಕಾರಣ ರಾಘವೇಂದ್ರ ರಾಜ್ಕುಮಾರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಘಣ್ಣ ಅವನ್ನು ನೋಡಲು ಸಹೋದರರಾದ ಪುನೀತ್ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಇಂದು ಆಸ್ಪತ್ರೆಗೆ ತೆರಳಿದ್ದರು.
ರಾಘು ಆರೋಗ್ಯವಾಗಿದ್ದಾರೆ, ಯಾವ ಸಮಸ್ಯೆಯೂ ಇಲ್ಲ: ಶಿವರಾಜ್ಕುಮಾರ್ - Raghavendra rajkumar health update
ರಾಘವೇಂದ್ರ ರಾಜ್ಕುಮಾರ್ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಆತ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ರಾಘವೇಂದ್ರ ರಾಜ್ಕುಮಾರ್ ಆರೋಗ್ಯ ವಿಚಾರಿಸಿದ ಶಿವಣ್ಣ, ಪುನೀತ್
ರಾಘಣ್ಣ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ಕುಮಾರ್, "ರಾಘು ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆ ಕೂಡಾ ಇಲ್ಲ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನನ್ನೊಂದಿಗೆ ರಾಘು ನಗುತ್ತಾ ಮಾತನಾಡಿದರು. ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ ಅಷ್ಟೇ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಕೆಲವು ದಿನಗಳ ವಿಶ್ರಾಂತಿ ಪಡೆದ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ. ರಾಘು ಇನ್ನೂ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಾರೆ ಎಂದು ಶಿವರಾಜ್ಕುಮಾರ್ ರಾಘಣ್ಣ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.