ಕರ್ನಾಟಕ

karnataka

ETV Bharat / sitara

ಗೆಳೆಯನಿಗೆ ದಾರಿ ಬಿಟ್ಟ ಶಿವಣ್ಣ, ಉಪ್ಪಿ 'I Love You' ಚಿತ್ರಕ್ಕಿಲ್ಲ ಆತಂಕ - undefined

ಇದೇ 14 ರಂದು ಉಪ್ಪಿ ಅವರ ಐ ಲವ್​ ಯು ಹಾಗೂ ಶಿವಣ್ಣನ ರುಸ್ತುಂ ಚಿತ್ರಗಳು ಬೆಳ್ಳಿ ಪರದೆ ಮೇಲೆ ಎದುರಾಗಲಿದ್ದವು. ಆದರೆ, ಇದೀಗ ಈ ಲವ-ಕುಶರ ಚಿತ್ರಗಳು ಪ್ರತ್ಯೇಕ ದಿನದಂದು ಬಿಡುಗಡೆಯಾಗುತ್ತಿವೆ.

ಉಪ್ಪಿ

By

Published : Jun 5, 2019, 12:49 PM IST

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ 'ರುಸ್ತುಂ' ಹಾಗೂ 'ಐ ಲವ್ ಯು' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಎಂದು ಸುದ್ದಿಯಾಗಿತ್ತು. ಇದರಿಂದ ತೆರೆಯ ಮೇಲೆ ಈ ಚಿತ್ರಗಳು ಕ್ಲಾಶ್​ ಆಗಿ, ಬಾಕ್ಸಾಫೀಸಿನಲ್ಲಿ ಹೊಡೆತ ಬೀಳುವ ಸಾಧ್ಯತೆಯಿತ್ತು.

ಇದನ್ನು ಮನಗಂಡಿರುವ ಜಯಣ್ಣ ಕಂಬೈನ್ಸ್ 'ರುಸ್ತುಂ' ಚಿತ್ರವನ್ನು ಎರಡು ವಾರ ಮುಂದಕ್ಕೆ ಹಾಕಿದ್ದಾರೆ. ಆದ್ದರಿಂದ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರ ನೋಡಲು ತಿಂಗಳ ಕೊನೇ ತನಕ ಕಾಯಬೇಕು.

ಆರ್​​.ಚಂದ್ರು ನಿರ್ದೇಶನದ ‘ಐ ಲವ್ ಯು’ ಚಿತ್ರ ಎರಡು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ, ಲೋಕ ಸಭೆ ಚುನಾವಣೆ ಚಿತ್ರದ ರಿಲೀಸ್​​ಗೆ ಅಡ್ಡಿ ಆಯಿತು. ಕಾರಣ ಉಪೇಂದ್ರ ಅವರ ಉತ್ತಮ ಪ್ರಜಕೀಯ ಪಕ್ಷ ಚುನಾವಣೆಗೆ ಸ್ಪರ್ಧೆ ಮಾಡಿದ್ದು. ಈಗ ಜೂನ್ 14ರಂದು 'ಐ ಲವ್ ಯು' ಬಿಡುಗಡೆ ದಿನಾಂಕ ನಿಗದಿ ಮಾಡಲಾಗಿದೆ. ಈ ದಿನದಂದೇ 'ರುಸ್ತುಂ' ಸಹ ಬಿಡುಗಡೆ ಎಂಬ ಸುದ್ದಿ ಬಂದಿತು. ಈಗ ಎಲ್ಲವೂ ಕ್ಲಿಯರ್ ಆಗಿದೆ. 14 ರಂದು 'ಐ ಲವ್ ಯು', 28 ರಂದು 'ರುಸ್ತುಂ' ಚಿತ್ರ ಬಿಡುಗಡೆಯಾಗುತ್ತಿವೆ.

ಅಂದಹಾಗೆ ಮುಂದಿನ ಶನಿವಾರ ವಿಶಾಖಪಟ್ಟಣಂನಲ್ಲಿ ಐ ಲವ್​ ಯು ಚಿತ್ರದ ತೆಲುಗು ಆವತರಣಿಕೆಯ ಟ್ರೈಲರ್ ಹಾಗೂ ಕನ್ನಡದ ಒಂದು ಹಾಡು ಬಿಡುಗಡೆ ಆಗಲಿದೆ.

For All Latest Updates

TAGGED:

ABOUT THE AUTHOR

...view details