ಕರ್ನಾಟಕ

karnataka

ETV Bharat / sitara

ರಾಜ್ಯದಲ್ಲಿ ಕನ್ನಡದಲ್ಲೇ ಆರ್​​ಆರ್​ಆರ್​ ಸಿನಿಮಾ ರಿಲೀಸ್​​ ಮಾಡಲು ರಾಜಮೌಳಿಗೆ​​ ಶಿವಣ್ಣ ಮನವಿ - ಆರ್​​ಆರ್​ಆರ್​ ಸಿನಿಮಾ ರಿಲೀಸ್​​

ನಾನು ಮೊದಲಿನಿಂದಲೂ ಎಲ್ಲಾ ಭಾಷೆಯ ಸಿನಿಮಾಗಳನ್ನ ನೋಡುತ್ತೇನೆ. ಇನ್ನು ನಾನು ರಾಜಮೌಳಿ ಅವರ ಅಭಿಮಾನಿ. ನಾನು ಬಾಹುಬಲಿ ಸಿನಿಮಾ ನೋಡಿ, ರಾಜಮೌಳಿ ಸರ್​​ಗೆ ಫೋನ್ ಮಾಡಿದ್ದೆ. ರಾಜಮೌಳಿ ಸರ್ ನಮ್ಮ ಭಾರತ ಚಿತ್ರರಂಗದ ಹೆಮ್ಮೆ. ಆರ್​ಆರ್​ಆರ್​ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ ಎಂದು ಕೋರಿದರು ಶಿವಣ್ಣ..

ನಟ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್

By

Published : Mar 20, 2022, 3:50 PM IST

ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್​​​​ಟಿಆರ್ ಒಟ್ಟಿಗೆ ಅಭಿನಯಸಿರುವ ಬಹು ನಿರೀಕ್ಷಿತ ಚಿತ್ರ ಆರ್‌ಆರ್‌ಆರ್. ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ಧೂರಿಯಾಗಿ ನಡೆಯಿತು.

ನಿರ್ದೇಶಕ ರಾಜಮೌಳಿಗೆ​​ ಹ್ಯಾಟ್ರಿಕ್‌ ಹೀರೊ ಶಿವಣ್ಣ ಮನವಿ ಮಾಡಿರುವುದು..

ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಟ ಶಿವರಾಜ್ ಕುಮಾರ್ ಕೂಡ ಆರ್‌ಆರ್‌ಆರ್ ಸಿನಿಮಾವನ್ನ ಫಸ್ಟ್ ಡೇ ನೋಡುತ್ತೇನೆ ಎಂದು ಹೇಳಿದರು. ಮೊದಲಿಗೆ ಸಹೋದರ ಪವರ್ ಸ್ಟಾರ್ ಪುನೀತ್‌ ಅವರನ್ನ ನೆನಪಿಸಿಕೊಂಡರು. ನೋವಿನಲ್ಲೂ ಶಿವರಾಜ್‌ಕುಮಾರ್ ಈ ಅದ್ದೂರಿ ವೇದಿಕೆಯಲ್ಲಿ ಮಾತನಾಡಿದರು.

ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್‌ಟಿಆರ್ ನನ್ನ ತಮ್ಮಂದಿರು, ಅಪ್ಪು ನಿಧನದ ನಂತರ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಇಬ್ಬರೂ ಬಂದಿದ್ದರು, ಇದು ನಮ್ಮ ಫ್ಯಾಮಿಲಿ ಎಂದು ಶಿವರಾಜ್ ಕುಮಾರ್ ಹೇಳಿದರು.

ನಾನು ಮೊದಲಿನಿಂದಲೂ ಎಲ್ಲಾ ಭಾಷೆಯ ಸಿನಿಮಾಗಳನ್ನ ನೋಡುತ್ತೇನೆ. ಇನ್ನು ನಾನು ರಾಜಮೌಳಿ ಅವರ ಅಭಿಮಾನಿ. ನಾನು ಬಾಹುಬಲಿ ಸಿನಿಮಾ ನೋಡಿ, ರಾಜಮೌಳಿ ಸರ್​​ಗೆ ಫೋನ್ ಮಾಡಿದ್ದೆ. ರಾಜಮೌಳಿ ಸರ್ನಯ

‘ಮ್ಮ ಭಾರತ ಚಿತ್ರರಂಗದ ಹೆಮ್ಮೆ. ಆರ್​ಆರ್​ಆರ್​ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ’ ಎಂದು ಕೋರಿದರು ಶಿವಣ್ಣ.

ABOUT THE AUTHOR

...view details