ಕರ್ನಾಟಕ

karnataka

ETV Bharat / sitara

ಕೊರೊನಾ ಬಗ್ಗೆ ನಟ ಶಿವರಾಜ್​​ ಕುಮಾರ್ ನೀಡಿದ ಸಲಹೆ ಏನು...? - ಕೊರೊನಾ ಬಗ್ಗೆ ಶಿವರಾಜ್​​ ಕುಮಾರ್ ಪ್ರತಿಕ್ರಿಯೆ

ನಾವು ಹೆಚ್ಚಾಗಿ ರಾಗಿಯನ್ನು ಉಪಯೋಗಿಸುತ್ತೇವೆ, ಆದ್ದರಿಂದ ನಮಗೆ ಕೊರೊನಾ ವೈರಸ್ ಬರುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ನಾಡಿನ ಜನತೆಗೆ ಸೆಂಚುರಿ ಸ್ಟಾರ್ ಮನವಿ ಮಾಡಿದ್ದಾರೆ. ಇಂದು ಸಿನಿಮಾವೊಂದರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೊರೊನಾ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ, ನಮಗೆ ಅಷ್ಟು ಸುಲಭವಾಗಿ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಹೇಳಿದ್ದಾರೆ.

Shivarajkumar
ಶಿವರಾಜ್​​ ಕುಮಾರ್

By

Published : Mar 10, 2020, 5:27 PM IST

Updated : Mar 10, 2020, 6:56 PM IST

ಮೈಸೂರು: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಕಾರಣ ಎಷ್ಟೋ ಶಾಲೆಗಳಿಗೆ ರಜೆ ಕೂಡಾ ನೀಡಲಾಗಿದೆ. ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇನ್ನು ಕೊರೊನಾ ಬಗ್ಗೆ ಸೆಂಚುರಿ ಸ್ಟಾರ್ ಶಿವರಾಜ್​​ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಬಗ್ಗೆ ಶಿವರಾಜ್​​​​ ಕುಮಾರ್ ಪ್ರತಿಕ್ರಿಯೆ

ನಾವು ಹೆಚ್ಚಾಗಿ ರಾಗಿಯನ್ನು ಉಪಯೋಗಿಸುತ್ತೇವೆ, ಆದ್ದರಿಂದ ನಮಗೆ ಕೊರೊನಾ ವೈರಸ್ ಬರುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ನಾಡಿನ ಜನತೆಗೆ ಸೆಂಚುರಿ ಸ್ಟಾರ್ ಮನವಿ ಮಾಡಿದ್ದಾರೆ. ಇಂದು ಸಿನಿಮಾವೊಂದರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೊರೊನಾ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ, ನಮಗೆ ಅಷ್ಟು ಸುಲಭವಾಗಿ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಹೇಳಿದ್ದಾರೆ.

ನಾವು ಹೆಚ್ಚಾಗಿ ರಾಗಿ ಉಪಯೋಗಿಸುತ್ತೇವೆ, ಆದ್ದರಿಂದ ನಮಗೆ ಈ ವೈರಸ್ ಹರಡುವುದಿಲ್ಲ. ಆದರೂ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೆಮ್ಮು ಕಾಣಿಸಿಕೊಂಡ ಕೂಡಲೇ ಡಾಕ್ಟರ್ ಬಳಿ ಹೋಗಿ ಚೆಕ್ ಮಾಡಿಸಿಕೊಳ್ಳಬೇಕು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಯಾರು ಏನೂ ಯೋಚನೆ ಮಾಡಬೇಡಿ. ನೀವೆಲ್ಲಾ ಆರೋಗ್ಯದ ಬಗ್ಗೆ ಗಮನ ನೀಡಿ. ಒಳ್ಳೆಯ ಆಹಾರ ತಿನ್ನಿ . ಕೊರೊನಾಗೆ ಹೆದರಿ ನಾವೆಲ್ಲಾ ಕೆಲಸ ಬಿಟ್ಟು ಮನೆಯಲ್ಲೇ ಕೂರಲು ಸಾಧ್ಯವಿಲ್ಲ. ದೇವರು ನಮ್ಮನ್ನು ರಕ್ಷಿಸುತ್ತಾರೆ ಎಂದು ಶಿವಣ್ಣ ಹೇಳಿದರು.

Last Updated : Mar 10, 2020, 6:56 PM IST

For All Latest Updates

ABOUT THE AUTHOR

...view details