ಕರ್ನಾಟಕ

karnataka

ETV Bharat / sitara

ಶಿವಣ್ಣನ ಹುಟ್ಟುಹಬ್ಬಕ್ಕೆ ಸುಂದರವಾದ ಗಿಫ್ಟ್ ನೀಡಿದ ಅಭಿಮಾನಿ - Shivarajkumar fan gifted 6 feet photo

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಯೊಬ್ಬರು ಶಿವಣ್ಣ ಅವರ ಸುಂದರವಾದ ಫೋಟೋವೊಂದಕ್ಕೆ 6 ಅಡಿ ಫ್ರೇಮ್ ಹಾಕಿಸಿ ಅದನ್ನು ಅವರಿಗೆ ನೀಡಿ ಬಂದಿದ್ದಾರೆ.

Shivarajkumar fan gifted 6 feet photo to his birthday
ಶಿವಣ್ಣನಿಗೆ 6 ಅಡಿ ಪೋಟೋ ಗಿಫ್ಟ್ ನೀಡಿದ ಅಭಿಮಾನಿ

By

Published : Jul 11, 2020, 7:08 PM IST

ನಾಳೆ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​ 58ನೇ ವಸಂತಕ್ಕೆ ಕಾಲಿಡಲಿದ್ಧಾರೆ. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಶಿವರಾಜ್​​ಕುಮಾರ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಆದ್ದರಿಂದ ಯಾರೂ ಮನೆ ಬಳಿ ಬರಬೇಡಿ ಎಂದು ಶಿವಣ್ಣ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಇನ್ನು ಅಭಿಮಾನಿಗಳು ಎಂದಿನಂತೆ ಶಿವಣ್ಣ ಮನೆ ಬಳಿ ಬಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಆಗದ ಕಾರಣ ತಮಗೆ ತಿಳಿದಂತೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ದೊಡ್ಡಬಳ್ಳಾಪುರದ ಅಭಿಮಾನಿಯೊಬ್ಬರು ಶಿವಣ್ಣನ 125 ಸಿನಿಮಾಗಳ ಹೆಸರನ್ನು 2 ನಿಮಿಷದಲ್ಲಿ ಹೇಳುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದರು. ಇದೀಗ ಮತ್ತೊಬ್ಬ ಅಭಿಮಾನಿಯೊಬ್ಬರು ಶಿವಣ್ಣನಿಗೆ ಅವರನ್ನೇ ಉಡುಗೊರೆಯಾಗಿ ನೀಡಿದ್ದಾರೆ.

ಶಿವಣ್ಣನಿಗೆ 6 ಅಡಿ ಪೋಟೋ ಗಿಫ್ಟ್ ನೀಡಿದ ಅಭಿಮಾನಿ

ಪ್ರಶಾಂತ್ ಪಚ್ಚಿ ಎಂಬ ಅಭಿಮಾನಿ ಶಿವರಾಜ್ ಕುಮಾರ್​​ಗೆ ಅಡ್ವಾನ್ಸ್ ಹುಟ್ಟುಹಬ್ಬದ ಶುಭಾಶಯ ಹೇಳುತ್ತಾ ಸದಾ ನೆನಪಿನಲ್ಲಿ‌ ಉಳಿಯುವಂತ ಉಡುಗೊರೆ ನೀಡಿದ್ದಾರೆ. ಮೂಲತಃ ಫೋಟೋಗ್ರಾಫರ್ ಆಗಿರುವ ಪ್ರಶಾಂತ್, ಶಿವರಾಜ್ ಕುಮಾರ್ ಅಭಿನಯದ 'ಆಯುಷ್ಮಾನ್ ಭವ' ಚಿತ್ರದ ಆಡಿಯೋ ದಿನದಂದು ಹ್ಯಾಟ್ರಿಕ್ ಹೀರೋ ನಡೆದು ಬರುತ್ತಿರುವ ನಗುಮುಖದ ಫೋಟೋವನ್ನ ಕ್ಲಿಕ್ಕಿಸಿದ್ರು. ಆ ಫೋಟೋ ಮರುದಿನ‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆ ಫೋಟೋವನ್ನು ಪ್ರಶಾಂತ್ ಪಚ್ಚಿ 6 ಅಡಿ ಎತ್ತರದ ಫ್ರೇಮ್ ಹಾಕಿಸಿ ಶಿವಣ್ಣನ ಮನೆ ಬಳಿ ಹೋಗಿ ನೀಡಿ ಬಂದಿದ್ದಾರೆ.

ಅಭಿಮಾನಿಯ ಈ ಪ್ರೀತಿಗೆ ಬೋಲ್ಡ್ ಆದ ಸೆಂಚುರಿ ಸ್ಟಾರ್ ಖುಷಿ ಪಟ್ಟಿದ್ದಾರೆ. ಅಭಿಮಾನಿಯನ್ನು ಪ್ರೀತಿಯಿಂದ ಉಪಚರಿಸಿದ್ದಾರೆ. ಶಿವಣ್ಣ ಅವರ ಇಡೀ ಕುಟುಂಬವೇ ಈ ಉಡುಗೊರೆಯನ್ನು ಇಷ್ಟಪಟ್ಟಿದೆ. ಈ ಸಂದರ್ಭದಲ್ಲಿ 'ಟಗರು' ಸಿನಿಮಾ ನಿರ್ಮಾಪಕ ಕೆ .ಪಿ. ಶ್ರೀಕಾಂತ್ ಕೂಡಾ ಉಪಸ್ಥಿತರಿದ್ದರು.

ABOUT THE AUTHOR

...view details