ಕನ್ನಡ ಚಿತ್ರರಂಗ, ರಾಜ್ ಕುಟುಂಬ ಸೇರಿದಂತೆ ಇಡೀ ರಾಜ್ಯದ ಜನತೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದಿಂದ ನಲುಗಿ ಹೋಗಿದೆ. ಲಕ್ಷ್ಮಣನಂತೆ ಇದ್ದ ತಮ್ಮನನ್ನು ಕಳೆದುಕೊಂಡು ಶಿವಣ್ಣ ಅತೀವ ನೋವಿನಲ್ಲಿದ್ದಾರೆ.
ಪುನೀತ್ ಬಗ್ಗೆ ಭಾವುಕರಾದ ಶಿವಣ್ಣ ಇಂದು ಸಹೋದರನ ಅಗಲಿಕೆಯ ನೋವಿನಿಂದ ಹೊರ ಬರಲು ಶಿವಣ್ಣ ಪ್ರಯತ್ನಿಸುತ್ತಿದ್ದು, ಮನೆ ಪಕ್ಕದಲ್ಲಿರುವ ಉದ್ಯಾನದಲ್ಲಿ ವಾಕಿಂಗ್ ಮಾಡಿ ಸ್ನೇಹಿತರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ಅಪ್ಪು ನಿಧನದಿಂದ ಕೆಲ ಭಾವುಕ ಮಾತುಗಳನ್ನಾಡಿದ್ದಾರೆ.
ಪುನೀತ್ ನನಗಿಂತ 13 ವರ್ಷ ಚಿಕ್ಕವನು. ನಾನು ಎತ್ತಿ ಆಡಿಸಿದ ಮಗು,ಇವತ್ತು ನಮ್ಮಿಂದ ದೂರವಾಗಿದ್ದಾನೆ ಅಂದರೆ ನಂಬಲು ಆಗುತ್ತಿಲ್ಲ. ನಮಗೆ ಅಪ್ಪು ಹಾಲು-ತುಪ್ಪ ಬಿಡುವ ಕಾರ್ಯ ಮಾಡಬೇಕಿತ್ತು. ಆದರೆ,ದೊಡ್ಡವರು ಚಿಕ್ಕವನಿಗೆ ಹಾಲು-ತುಪ್ಪ ಕಾರ್ಯ ಮಾಡುವ ಪರಿಸ್ಥಿತಿ ಬಂದಿದೆ ಎಂದು ಭಾವುಕರಾದರು.
ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ. ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ನಟ ಶಿವರಾಜ್ ಕುಮಾರ್ ಕುಟುಂಬ, ರಾಘವೇಂದ್ರ ರಾಜ್ ಕುಮಾರ್, ಬಂಧು ಮಿತ್ರರು ಮತ್ತು ಸಿನಿಮಾರಂಗದ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: 'ಅಪ್ಪು ಪ್ರೀತಿಯ ರಾಯಭಾರಿ' : ಪುನೀತ್ ಕುಟುಂಬಕ್ಕೆ ತಮಿಳು ನಟ ಪ್ರಭು ಗಣೇಶನ್ ಸಾಂತ್ವನ