ಕರ್ನಾಟಕ

karnataka

ETV Bharat / sitara

"ದ್ರೋಣ" ನಾಗಿ ಬರ್ತಿದ್ದಾರೆ ಹ್ಯಾಟ್ರಿಕ್ ಹೀರೋ... ಸೆಪ್ಟೆಂಬರ್​​​ಗೆ ಸಿನಿಮಾ ರಿಲೀಸ್..? - ಸ್ಯಾಂಡಲ್​ವುಡ್​ ಸಿನಿಮಾ ನ್ಯೂಸ್​

ದ್ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದ್ದು ಚಿತ್ರವನ್ನು ಸೆಪ್ಟೆಂಬರ್​​ನಲ್ಲಿ ತೆರೆಗೆ ತರುವ ಪ್ಲ್ಯಾನ್​‌‌ ನಡೆಯುತ್ತಿದೆ. ಶಿವಣ್ಣನ‌ ಅಭಿಮಾನಿಗಳು ಮುಂದಿನ ತಿಂಗಳು "ದ್ರೋಣ" ಚಿತ್ರವನ್ನು ಕಣ್ತುಂಬಿಕೊಳ್ಳಬಹುದು‌.

ಸೆಪ್ಟೆಂಬರ್​​​ಗೆ ದ್ರೋಣ ಸಿನಿಮಾ ರಿಲೀಸ್

By

Published : Aug 4, 2019, 7:48 PM IST

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​​​ ಸದ್ಯ ಬಲಭುಜದ ಆಪರೇಷನ್ ಮಾಡಿಸಿಕೊಂಡು ರೆಸ್ಟ್​​ನಲ್ಲಿದ್ದಾರೆ. ಸೆಂಚುರಿ ಸ್ಟಾರ್ ಇನ್ನೂ ಎರಡು ತಿಂಗಳು ಶೂಟಿಂಗ್ ನಲ್ಲಿ ಭಾಗಿಯಾಗದಿದ್ರು ಸಹ ಅವರ ಸಿನಿಮಾ ವರ್ಕ್​​​ಗಳು ಮಾತ್ರ ನಡೆಯುತ್ತಲೇ ಇದೆ.

"ದ್ರೋಣ" ನಾಗಿ ಬರ್ತಿದ್ದಾರೆ ಹ್ಯಾಟ್ರಿಕ್ ಹೀರೋ

ಸದ್ಯ ಈಗ ಮೈಲಾರಿಯ ಹೊಸ ಅವತಾರವಾದ "ದ್ರೋಣ" ಚಿತ್ರ ಸದ್ಯ ರಿಲೀಸ್​​ಗೆ ರೆಡಿಯಾಗಿದೆ. ಕವಚ ಚಿತ್ರದ ನಂತರ ಶಿವಣ್ಣ ಮತ್ತೆ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾದ ದ್ರೋಣ ಸಿನಿಮಾದಲ್ಲಿ ಕಾಣಿಸಿದ್ದಾರೆ.

ದ್ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದ್ದು ಚಿತ್ರವನ್ನು ಸೆಪ್ಟೆಂಬರ್​​ನಲ್ಲಿ ತೆರೆಗೆ ತರುವ ಪ್ಲ್ಯಾನ್​‌‌ ನಡೆಯುತ್ತಿದೆ. ಶಿವಣ್ಣನ‌ ಅಭಿಮಾನಿಗಳು ಮುಂದಿನ ತಿಂಗಳು "ದ್ರೋಣ" ಚಿತ್ರವನ್ನು ಕಣ್ತುಂಬಿಕೊಳ್ಳಬಹುದು‌.

ಇನ್ನೂ ದ್ರೋಣ ಚಿತ್ರಕ್ಕೆ ಸುಗ್ರೀವ ಸಿನಿಮಾದ ಪ್ರಮೋದ್​ ಚಕ್ರವರ್ತಿ ಆ್ಯಕ್ಷನ್​ ಕಟ್ ಹೇಳಿದ್ದು, ಮೀಡಿಯಾ ಹೌಸ್​ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ ಮತ್ತು ಶೇಶು ಚಕ್ರವರ್ತಿ ನಿರ್ಮಿಸುತ್ತಿದ್ದಾರೆ. ದ್ರೋಣ ಚಿತ್ರ ಹ್ಯಾಟ್ರಿಕ್ ಹೀರೋಗೆ ಒಳ್ಳೆ ಮೈಲೇಜ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​​​

ABOUT THE AUTHOR

...view details