ಕರ್ನಾಟಕ

karnataka

ETV Bharat / sitara

ಕೇರಳದ ಗರ್ಭಿಣಿ ಆನೆ ದುರಂತ..ಘಟನೆಯನ್ನು ಖಂಡಿಸಿದ ಶಿವರಾಜ್​​​​ಕುಮಾರ್, ರಮ್ಯಾ - Shivarajkumar Condemned Pregnant elephant death

ಸ್ಯಾಂಡಲ್​​ವುಡ್ ನಟ ಶಿವರಾಜ್​ಕುಮಾರ್ ಹಾಗೂ ನಟಿ, ಮಾಜಿ ಸಂಸದೆ ರಮ್ಯಾ ಕೇರಳದ ಗರ್ಭಿಣಿ ಆನೆ ದುರಂತ ಸಾವಿನ ಘಟನೆಯನ್ನು ಖಂಡಿಸಿದ್ದಾರೆ. ಪಾಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

Shivarajkumar
ಶಿವರಾಜ್​​​​ಕುಮಾರ್

By

Published : Jun 4, 2020, 7:13 PM IST

ಕೇರಳದ ಗರ್ಭಿಣಿ ಆನೆ ದುರಂತ ವಿಚಾರ ಕಳೆದ 2 ದಿನಗಳಿಂದ ದೇಶಾದ್ಯಂತ ಚರ್ಚೆಯಾಗುತ್ತಿದೆ. ಹಣ್ಣಿನಲ್ಲಿ ಸ್ಫೋಟಕ ಇಟ್ಟು ಆನೆಗೆ ನೀಡಿ ಕೊಂದ ದುರುಳರಿಗೆ ಇಡೀ ದೇಶವೇ ಶಾಪ ಹಾಕುತ್ತಿದೆ.

ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೆ ಈ ಅಮಾನುಷ ಕೃತ್ಯವನ್ನು ಖಂಡಿಸಿದ್ದಾರೆ. ಸ್ಯಾಂಡಲ್​​ವುಡ್​ ತಾರೆಗಳಾದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹಾಗೂ ನಟಿ, ಮಾಜಿ ಸಂಸದೆ ರಮ್ಯಾ ತಮ್ಮ ಟ್ವಿಟ್ಟರ್​​​ನಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಶಿವರಾಜ್​​ಕುಮಾರ್ ಟ್ವೀಟ್

'ಮಾನವರ ಮಕ್ಕಳು ಹೇಗೆ ಶ್ರೇಷ್ಠರೋ ಪ್ರಾಣಿಗಳು ಹಾಗೂ ಅವುಗಳ ಮರಿಗಳು ಕೂಡಾ ಅಷ್ಟೇ ಶ್ರೇಷ್ಠ ಹಾಗೂ ವಿಶಿಷ್ಟ. ಮೂಕ ಪ್ರಾಣಿಗಳನ್ನು ಕೊಲ್ಲುವ ರಾಕ್ಷಸ ಗುಣದ ಮನುಷ್ಯನಿಗೆ ಧಿಕ್ಕಾರ' ಎಂದು ಶಿವರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಟಿ, ಮಾಜಿ ಸಂಸದೆ ರಮ್ಯಾ

ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರವಿದ್ದ ರಮ್ಯಾ ಕೂಡಾ ಟ್ವೀಟ್ ಮಾಡಿ, 'ಆನೆಯ ಸಾವಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹೂಡುವಂತೆ ಪಿಟಿಷನ್ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಈ ಪಿಟಿಷನ್​​​​ಗೆ ಸಹಿ ಹಾಕುವಂತೆ ಮನವಿ ಮಾಡಿ ಲಿಂಕ್​​​​ವೊಂದನ್ನು ರಮ್ಯಾ ಹಂಚಿಕೊಂಡಿದ್ದಾರೆ. ರಮ್ಯಾ ಅವರ ಈ ಅಭಿಯಾನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಮ್ಯಾ ಟ್ವೀಟ್

ಕೇರಳದ ಮಲಪ್ಪುರಂನಲ್ಲಿ ಆಹಾರ ಹುಡುಕಿಕೊಂಡು ಕಾಡು ಬಿಟ್ಟು ನಾಡಿಗೆ ಬಂದ ಗರ್ಭಿಣಿ ಆನೆಯೊಂದಕ್ಕೆ ಪಾಪಿಗಳು ಹಣ್ಣಿನಲ್ಲಿ ಸಿಡಿಮದ್ದು ಇಟ್ಟು ತಿನ್ನಲು ಕೊಟ್ಟಿದ್ದಾರೆ. ಈ ಹಣ್ಣನ್ನು ತಿನ್ನುವಾಗ ಸಿಡಿಮದ್ದು ಸ್ಫೋಟಗೊಂಡ ಕಾರಣ ಆನೆ ಸಾವನ್ನಪ್ಪಿದೆ.

ABOUT THE AUTHOR

...view details