ಕರ್ನಾಟಕ

karnataka

ETV Bharat / sitara

ನಾಳೆ 'ಕವಲುದಾರಿ' ರಿಲೀಸ್​​​​​​​: ಪುನೀತ್​​​​ಗೆ ಶುಭ ಕೋರಿದ ಶಿವಣ್ಣ, ರಾಕಿ ಭಾಯ್​​​ - undefined

ಅನಂತ್​ನಾಗ್ ಹಾಗೂ ರಿಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್​​​​ ಅಡಿ ತಯಾರಾದ ಮೊದಲ ಸಿನಿಮಾ 'ಕವಲುದಾರಿ' ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರತಂಡಕ್ಕೆ ಎಲ್ಲರೂ ಶುಭ ಕೋರಿದ್ದಾರೆ.

ಶಿವರಾಜ್​​​ಕುಮಾರ್, ಯಶ್​

By

Published : Apr 11, 2019, 11:45 PM IST

ಪುನೀತ್ ರಾಜ್​ಕುಮಾರ್ ಪಿಆರ್​​ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಮೊದಲ ಸಿನಿಮಾ 'ಕವಲುದಾರಿ' ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಸಾಕಷ್ಟು ಸೆಲಬ್ರಿಟಿಗಳು ಶುಭ ಕೋರಿದ್ದಾರೆ.

ಸಿನಿಮಾಗೆ ಶುಭ ಕೋರಿದ ಶಿವಣ್ಣ, ಯಶ್​, ವಿನಯ್​ ರಾಜ್​​ಕುಮಾರ್​​​

ಹಿರಿಯ ನಟ ಅನಂತ್​​​ನಾಗ್ ಹಾಗೂ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಕವಲುದಾರಿ. ಈ ಸಿನಿಮಾ ಆರಂಭದಿಂದಲೇ ದೊಡ್ಡ ಸೆನ್ಸೇಷನ್ ಸೃಷ್ಟಿಸಿತ್ತು. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅನಂತ್​​ನಾಗ್ ನಟಿಸಿದ್ದಾರೆ. 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಖ್ಯಾತಿಯ ಹೇಮಂತ್ ರಾವ್​​ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇನ್ನು ಪುನೀತ್ ಸಾಹಸಕ್ಕೆ ಅಣ್ಣ ಶಿವರಾಜ್​​ಕುಮಾರ್​​​​​​ ವಿಶ್ ಮಾಡಿದ್ದಾರೆ. 'ನಾಳೆ ಕವಲುದಾರಿ ಸಿನಿಮಾ ಬಿಡುಗಡೆಯಾಗುತ್ತಿದೆ. ಪುನೀತ್ ಬ್ಯಾನರ್​​ನ ಮೊದಲ ಸಿನಿಮಾ ಇದು. ನನಗೆ ಬಹಳ ಖುಷಿಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಹರಸಿ. ಇಡೀ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್' ಎಂದು ಶಿವಣ್ಣ ವಿಶ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೂಡಾ ಸಿನಿಮಾಗೆ ವಿಶ್ ಮಾಡಿದ್ದಾರೆ. 'ಪಿಆರ್​​ಕೆ ಬ್ಯಾನರ್​​​ನಲ್ಲಿ ತಯಾರಾದ ಮೊದಲ ಸಿನಿಮಾ ಇದು. ನನಗೂ ಸಿನಿಮಾ ನೋಡಬೇಕು ಎನಿಸುತ್ತಿದೆ. ಅನಂತ್​ನಾಗ್ ಕೂಡಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ನೋಡಿ ಹರಸಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಇನ್ನು ರಾಘವೇಂದ್ರ ರಾಜ್​​​ಕುಮಾರ್​ ಪುತ್ರ ವಿನಯ್ ರಾಜ್​​ಕುಮಾರ್ ಕೂಡಾ ಚಿತ್ರತಂಡಕ್ಕೆ ವಿಶ್ ಮಾಡಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details