ಕರ್ನಾಟಕ

karnataka

ETV Bharat / sitara

ಪ್ರೇಮಕಥೆಯಲ್ಲಿ ಹ್ಯಾಟ್ರಿಕ್ ಹೀರೋ.. ಸದ್ಯದಲ್ಲೇ ಸಿನಿಮಾ ಪ್ರಾರಂಭ - Shivraj Kumar Birthday

ಬಹಳ ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಒಂದು ಔಟ್ ಆ್ಯಂಡ್ ಔಟ್ ಪ್ರೇಮಕಥೆ ಇರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ತೆಲುಗಿನ ನಿರ್ಮಾಪಕರು ನಿರ್ಮಿಸುತ್ತಿದ್ದಾರೆ. ಗೌತಮ್ ರೆಡ್ಡಿ, ಕೀರ್ತಿ ಚಿಲುಕುರಿ ಮತ್ತು ವಿವೇಕ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಿಯದರ್ಶಿನಿ ರಾಮ್ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Shivaraj kumar
ಬಹಳ ವರ್ಷಗಳ ನಂತರ ಪ್ರೇಮಕಥೆಯಲ್ಲಿ ಹ್ಯಾಟ್ರಿಕ್ ಹೀರೋ

By

Published : Jul 12, 2021, 9:54 AM IST

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಆ್ಯಕ್ಷನ್​ ಹಾಗೂ ಮಾಸ್ ಚಿತ್ರಗಳಿಗೆ ಬಹಳ ಜನಪ್ರಿಯ. ಇದುವರೆಗೂ ಅವರು ಅಂತಹ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಪ್ರೇಮಕಥೆಯೂ ಒಂದು ಭಾಗವಾಗಿರುತ್ತದೆ. ಬಹಳ ವರ್ಷಗಳ ನಂತರ ಒಂದು ಔಟ್ ಆ್ಯಂಡ್ ಔಟ್ ಪ್ರೇಮಕಥೆ ಇರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ತೆಲುಗಿನ ನಿರ್ಮಾಪಕರು ನಿರ್ಮಿಸುತ್ತಿದ್ದಾರೆ. ಗೌತಮ್ ರೆಡ್ಡಿ, ಕೀರ್ತಿ ಚಿಲುಕುರಿ ಮತ್ತು ವಿವೇಕ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಿಯದರ್ಶಿನಿ ರಾಮ್ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಚಿತ್ರಗಳ ಮಧ್ಯೆ ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಶಿವರಾಜ್​ ಕುಮಾ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಸದ್ಯ, ಭೈರಾಗಿ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸೆಂಚುರಿ ಸ್ಟಾರ್​, ನಂತರ ತೆಲುಗು ನಿರ್ಮಾಪಕರ ಸಿನಿಮಾ ಮಾಡಲಿದ್ದಾರಂತೆ. ಅದನ್ನು ಮುಗಿಸಿ ತಮ್ಮದೇ ಬ್ಯಾನರ್​​​​​​​​​ನಲ್ಲಿ ನಿರ್ಮಾಣವಾಗುತ್ತಿರುವ 'ವೇದ' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ವಿಶೇಷವೆಂದರೆ, ಇದು ಅವರ 125ನೇ ಚಿತ್ರ. ಈ ಚಿತ್ರವನ್ನು ಎ.ಹರ್ಷ ನಿರ್ದೇಶಿಸುತ್ತಿದ್ದು, ಇದು ಸಹ ಇನ್ನೊಂದು ವಿಭಿನ್ನ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ನಂತರ ರಿಷಭ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಇನ್ನೊಂದಿಷ್ಟು ಸಿನಿಮಾಗಳು ಘೋಷಣೆಯಾಗಿದ್ದು, ಮೊದಲಿಗೆ ಈ ಮೂರು ಚಿತ್ರಗಳನ್ನು ಮುಗಿಸಿ, ಆ ನಂತರ ಬೇರೆ ಚಿತ್ರಗಳಲ್ಲಿ ಶಿವರಾಜ್​ ಕುಮಾರ್ ನಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:Bigg Boss 8: ರಘು ಭವಿಷ್ಯದ ಪ್ರಕಾರ ಗೆಲ್ಲೋದು ಇವರೇ!

ABOUT THE AUTHOR

...view details