ಕರ್ನಾಟಕ

karnataka

ETV Bharat / sitara

'ಭಜರಂಗಿ 2' ಸಿನಿಮಾವನ್ನ ಪವರ್ ಸ್ಟಾರ್ ಅಪ್ಪುಗೆ ಅರ್ಪಿಸಿದ ಸೆಂಚುರಿ ಸ್ಟಾರ್ - Shivaraj Kumar dedicates Bhajarangi 2 movie to puneeth rajkumar

ಅಪ್ಪು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ತಮ್ಮ ಸಿನಿಮಾವೆಂಬಂತೆ ಪ್ರೀತಿಸಿದ್ದರು. ಅಪ್ಪು ಎಡಿಟಿಂಗ್ ರೂಮ್​​ನಲ್ಲಿ ಈ ಚಿತ್ರ ಎಡಿಟ್ ಆಗಿತ್ತು. ಸಿನಿಮಾದ ಸಾಕಷ್ಟು ದೃಶ್ಯ ನೋಡಿ‌ ಅಪ್ಪು‌ ಮೆಚ್ಚಿದ್ದರು. ತುಂಬಾ ಚೆನ್ನಾಗಿ ಬಂದಿದೆ ಅಂತಾ ಹೊಗಳಿದ್ದರು. ಸಿನಿಮಾದ ಪ್ರಿ-ರಿಲೀಸ್​ ಇವೆಂಟ್​ನಲ್ಲಿ ಕೂಡ ಹೆಜ್ಜೆ ಹಾಕಿದ್ದರು..

Shivaraj Kumar dedicates Bhajarangi 2 movie to puneeth rajkumar
ಭಜರಂಗಿ 2 ಸಿನಿಮಾವನ್ನಪುನೀತ್ ರಾಜ್​​ಕುಮಾರ್​ಗೆ ಅರ್ಪಿಸಿದ ಶಿವಣ್ಣ

By

Published : Dec 21, 2021, 6:03 PM IST

ಡಾ.ರಾಜ್ ಕುಟುಂಬದ ಅಪರೂಪದ ಮುತ್ತು, ಇಬ್ಬರು ಅಣ್ಣಂದಿರ ಸ್ವತ್ತು ಪುನೀತ್ ರಾಜ್​​ಕುಮಾರ್ ಕರ್ನಾಟಕದ ರತ್ನ.. ಅಭಿಮಾನಿಗಳ ಯುವರತ್ನ. ಅಪ್ಪನ ಹಾದಿಯಲ್ಲಿಯೇ ಸಾಗಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸಿದ ಅಮೂಲ್ಯ ರತ್ನ ಅಪ್ಪು ಅಂದ್ರೆ ಶಿವಣ್ಣನಿಗೆ ಅಚ್ಚು ಮೆಚ್ಚು.

ಸಹೋದರರಿಗಿಂತ ಹೆಚ್ಚಾಗಿ ಶಿವಣ್ಣ-ಅಪ್ಪು ಗೆಳೆಯರಂತಿದ್ದವರು. ರಾಮ-ಲಕ್ಷ್ಮಣರಂತೆ ಬಾಳಿ ಬದುಕುತ್ತಿದ್ದವರು. ಆದರೆ, ಅಪ್ಪು ಎಲ್ಲರನ್ನು ಅಗಲಿ ಬಾರದೂರಿಗೆ ಹೋಗಿದ್ದಾರೆ. ಹಾಗಂತಾ, ಅಪ್ಪು ನಮ್ಮೊಂದಿಗೆ ಇಲ್ಲ ಅಂತಲ್ಲ. ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ. ಕರುನಾಡಿನ ಮನೆ, ಮನದಲ್ಲಿ ಅಪ್ಪು ಎಂದೆಂದಿಗೂ ಅಮರ, ಅಜರಾಮರ..

ಭಜರಂಗಿ 2 ಸಿನಿಮಾವನ್ನಪುನೀತ್ ರಾಜ್​​ಕುಮಾರ್​ಗೆ ಅರ್ಪಿಸಿದ ಶಿವಣ್ಣ..

ಪ್ರೀತಿಯ ಪುನೀತ್​​ನಿಗಾಗಿ ಅಣ್ಣ ಶಿವರಾಜ್ ಕುಮಾರ್ ತಮ್ಮ 'ಭಜರಂಗಿ 2' ಸಿನಿಮಾವನ್ನು ಅರ್ಪಿಸಿದ್ದಾರೆ. ಅಪ್ಪುಗೆ ತನ್ನ ತಮ್ಮ ಎಂಬ ಕಾರಣಕ್ಕಾಗಿ ಈ ಚಿತ್ರ ಅರ್ಪಿಸಿಲ್ಲ. ಅದರ ಹಿಂದೆ ಬಲವಾದ ಕಾರಣವೂ ಇದೆ ಅಂತಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ: ಶಿವಣ್ಣ ಫ್ಯಾನ್ಸ್​​​ಗೆ ಗುಡ್​ ನ್ಯೂಸ್​​ : ಒಟಿಟಿಯಲ್ಲಿ ಭಜರಂಗಿ 2 ಸಿನಿಮಾ ವೀಕ್ಷಿಸಲು ಡೇಟ್ ಫಿಕ್ಸ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಭಜರಂಗಿ 2 ಸಿನಿಮಾ ಸ್ಯಾಂಡಲ್​​ವುಡ್​​ನಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿ ತಯಾರಾಗಿತ್ತು. ನಿರ್ಮಾಪಕರಾದ ಜಯಣ್ಣ ಮತ್ತು ಭೋಗಣ್ಣ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದರು.

ಆದರೆ, ಸಿನಿಮಾ ಬಿಡುಗಡೆಯಾದ ದಿನವೇ ಅಪ್ಪು ಇಹಲೋಕ ತ್ಯಜಿಸಿದ್ದರು. ಇದೀಗ ಭಜರಂಗಿ 2 ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗ್ತಿದೆ. ಇದೇ 23 ರಂದು 'ಜೀ 5' ಆ್ಯಪ್​​ನಲ್ಲಿ ಚಿತ್ರ ಅಬ್ಬರಿಸಲಿದೆ‌. ಒಟಿಟಿಯಲ್ಲಿ ಬಿಡುಗಡೆಯಾಗ್ತಿರುವ ಭಜರಂಗಿ 2 ಸಿನಿಮಾವನ್ನು ಶಿವಣ್ಣ ಅಪ್ಪುಗೆ ಅರ್ಪಿಸಿದ್ದಾರೆ.

ಇದನ್ನೂ ಓದಿ: ಭಜರಂಗಿ ಬೆನ್ನಹಿಂದೆ ನಿಂತು ಮರೆಯಾದ 'ಅಪ್ಪು': ಅಣ್ಣನ ಕೊನೆಯ ಕಾರ್ಯಕ್ರಮದಲ್ಲಿ 'ಯುವರತ್ನ'

"ಅಪ್ಪು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ತಮ್ಮ ಸಿನಿಮಾವೆಂಬಂತೆ ಪ್ರೀತಿಸಿದ್ದರು. ಅಪ್ಪು ಎಡಿಟಿಂಗ್ ರೂಮ್​​ನಲ್ಲಿ ಈ ಚಿತ್ರ ಎಡಿಟ್ ಆಗಿತ್ತು. ಸಿನಿಮಾದ ಸಾಕಷ್ಟು ದೃಶ್ಯ ನೋಡಿ‌ ಅಪ್ಪು‌ ಮೆಚ್ಚಿದ್ದರು. ತುಂಬಾ ಚೆನ್ನಾಗಿ ಬಂದಿದೆ ಅಂತಾ ಹೊಗಳಿದ್ದರು. ಸಿನಿಮಾದ ಪ್ರಿ-ರಿಲೀಸ್​ ಇವೆಂಟ್​ನಲ್ಲಿ ಕೂಡ ಹೆಜ್ಜೆ ಹಾಕಿದ್ದರು.

ಅಷ್ಟೇ ಅಲ್ಲ, ರಿಲೀಸ್ ಆಗೋ ದಿನ ಬೆಳಗ್ಗೆ ವಿಷ್ ಮಾಡಿದ್ದರು. ಸಿನಿಮಾ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು. ಇದರಲ್ಲೇ ಗೊತ್ತಾಗತ್ತೆ ಭಜರಂಗಿಗೆ ಎಷ್ಟು ಹತ್ರ ಅಪ್ಪು ಅಂತಾ.. ಈ ಸಿನಿಮಾದಲ್ಲಿ ಅಪ್ಪುಗೆ ರಿಲೇಟ್​ ಆಗುವ ಸಾಕಷ್ಟು ಸನ್ನಿವೇಶಗಳು ಸಹ ಇವೆ" ಅಂತಾರೆ ಶಿವಣ್ಣ.

ಇದನ್ನೂ ಓದಿ:ಬೆಳಗ್ಗೆ 7.33ಕ್ಕೆ ಅಣ್ಣನ 'ಭಜರಂಗಿ-2' ಸಿನಿಮಾ ತಂಡಕ್ಕೆ ಶುಭ ಕೋರಿದ್ದರು ಅಪ್ಪು

ABOUT THE AUTHOR

...view details