ಪ್ರೇಮ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಮತ್ತು ಅಭಿನಯ ಚಕ್ರವರ್ತಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದಾರೆ. ಇನ್ನು ಶಿವಣ್ಣ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತ ಮಾಸ್ ಜೋಡಿಯನ್ನ ಯಾವಾಗ ಒಟ್ಟಿಗೆ ನೋಡೋದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಭಿಮಾನಿಗಳ ಕಾತರಕ್ಕೆ ಈ ಇಬ್ಬರು ನಟರು ತೆರೆ ಎಳೆದಿದ್ದು, ಆದಷ್ಟು ಬೇಗ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ. ನಟ ರಾಜಕುಮಾರ್ ಸಂಬಂಧಿ ಧ್ರುವನ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ಶಿವರಾಜ್ ಕುಮಾರ್ ಹಾಗೂ ದರ್ಶನ್ ಚಿತ್ರಕ್ಕೆ ಚಾಲನೆ ನೀಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ನಮ್ಮಿಬ್ಬರ ಕಾಂಬಿನೇಷನ್ ನಲ್ಲಿ ಖಂಡಿತವಾಗಿ ಸಿನಿಮಾ ಬರುತ್ತೆ ಎಂದಿದ್ದಾರೆ.