ಕರ್ನಾಟಕ

karnataka

ETV Bharat / sitara

ಅನಾಥಾಶ್ರಮದಲ್ಲಿ ಶಿವಣ್ಣನ ಬರ್ತ್‌ಡೇ ಆಚರಿಸಿದ ಪಿಆರ್‌ಕೆ ಬಾಯ್ಸ್! - etv bharat

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಹೋಸಕೊಟೆ ಪಿಅರ್​​ಕೆ ಬಾಯ್ಸ್ ಸ್ಪರ್ಶ ಅನಾಥಾಶ್ರಮದಲ್ಲಿ ಅನಾಥ ಮಕ್ಕಳಿಂದ ಕೇಕ್ ಕಟ್ ಮಾಡಿಸುವ ಮೂಲಕ ವಿಶೇಷವಾಗಿ ಸೆಂಚುರಿಸ್ಟಾರ್ ಬರ್ತ್‌ಡೇ ಆಚರಿಸಿದ್ದಾರೆ.

ಶಿವಣ್ಣ ಬರ್ತ್​​​ ಡೇ

By

Published : Jul 13, 2019, 11:45 PM IST

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಹೋಸಕೊಟೆ ಪಿಆರ್​​ಕೆ ಬಾಯ್ಸ್ ಸ್ಪರ್ಶ ಅನಾಥಾಶ್ರಮದಲ್ಲಿ ಅನಾಥ ಮಕ್ಕಳಿಂದ ಕೇಕ್ ಕಟ್ ಮಾಡಿಸುವ ಮೂಲಕ ವಿಶೇಷವಾಗಿ ಸೆಂಚುರಿಸ್ಟಾರ್ ಬರ್ತ್‌ಡೇ ಆಚರಿಸಿದ್ದಾರೆ.

ಅನಾಥಾಶ್ರಮದಲ್ಲಿ ಹ್ಯಾಟ್ರಿಕ್‌ ಹೀರೋ ಡಾ. ಶಿವಣ್ಣನ ಬರ್ತ್‌​ಡೇ..

ಸುಮಾರು ನೂರಕ್ಕೂ ಹೆಚ್ಚು ಮಕ್ಕಳಿರುವ ಸ್ಪರ್ಶ ಅನಾಥಾಶ್ರಮದ ಮಕ್ಕಳು ಕೇಕ್ ಕಟ್ ಮಾಡಿ ಶಿವಣ್ಣನಿಗೆ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಲ್ಲದೆ ಪಿಆರ್‌ಕೆ ಬಾಯ್ಸ್ ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ಸಿಂಪಲ್ ಆಗಿ ಭಜರಂಗಿಯ ಬರ್ತ್‌ಡೇ ಆಚರಿಸಿದ್ದಾರೆ.

ಬಲ‌ಭುಜ ಶಸ್ತ್ರಚಿಕಿತ್ಸೆಗಾಗಿ ಲಂಡನ್​ನಲ್ಲಿರುವ ಶಿವಣ್ಣ ಅಲ್ಲಿಂದ ವಾಪಸ್ ಆದ ನಂತ್ರ ಮತ್ತೆ ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡುವುದಾಗಿ ಹೇಳಿದ್ದು, ಇದೇ ತಿಂಗಳಲ್ಲಿ ಮತ್ತೆ ಅದ್ದೂರಿಯಾಗಿ ಬಂಗಾರು ಬರ್ತ್‌ಡೇ ಆಚರಿಸಲು ಪ್ಲಾನ್ ಮಾಡಿರುವ ಶಿವ ಸೈನ್ಯ ಶಿವಣ್ಣನ ಆರಾಧ್ಯೋತ್ಸವಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ.

ABOUT THE AUTHOR

...view details