ಡಾಲಿ ಧನಂಜಯ ತಮ್ಮ ಕನಸಿನ ಸಿನಿಮಾದ 'ಬಡವ ರಾಸ್ಕಲ್' ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು, ನಿನ್ನೆ ತಾನೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.
ನಾಳೆ ಡಾಲಿ ಹುಟ್ಟುಹಬ್ಬವಿದ್ದು ನಾಳೆಯೇ ಚಿತ್ರ ಸೆಟ್ಟೆರ್ತಿದೆ. ಈಗ ಡಾಲಿಗೆ ಟಗರು ಶಿವಣ್ಣ ಗುಡ್ ಲಕ್ ಹೇಳಿದ್ದಾರೆ. ಟಗರು ಸಿನಿಮಾದಲ್ಲಿ ಡಾಲಿ ಅವತಾರದಲ್ಲಿ ಅಬ್ಬರಿಸಿ, ಈಗ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿ ಚಿತ್ರನಿರ್ಮಾಣಕ್ಕೆ ಧನಂಜಯ್ ಕೈ ಹಾಕಿದ್ದಾರೆ.
" ಬಡವ ರಾಸ್ಕಲ್"ಗೆ ಗುಡ್ ಲಕ್ ಹೇಳಿದ ಸಂಚುರಿ ಸ್ಟಾರ್ 'ಇದು ತುಂಬ ಖುಷಿಯಾದ ವಿಷಯ. ಅಪ್ಪಾಜಿಗೆ ತುಂಬಾ ಇಷ್ಟವಾದ ಬೈಗುಳದ ಪದವಾದ " ಬಡವ ರಾಸ್ಕಲ್ " ಅನ್ನು ಟೈಟಲ್ ಆಗಿ ಇಡಲಾಗಿದೆ. ಅಪ್ಪಾಜಿ ನಾವು ಏನಾದ್ರು ತಪ್ಪು ಮಾಡಿದ್ರೆ ಪ್ರೀತಿಯಿಂದ ನಮಗೆ ಬಡವ ರಾಸ್ಕಲ್ ಅಂತ ಬೈತಿದ್ರು ' ಎಂದು ತಮ್ಮ ಹಿಂದಿನ ದಿನಗಳನ್ನು ಶಿವಣ್ಣ ನೆನಪು ಮಾಡಿಕೊಂಡರು.
ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಅಭಿನಯ ಮಾಡುತ್ತಿರುವ ನಿನಗೆ ಒಳ್ಳೆಯದಾಗಲಿ ಹಾಗೂ ಹ್ಯಾಪಿ ಬರ್ತ್ ಡೇ ಧನಂಜಯ್ ಅಂತ ಶಿವಣ್ಣ ವಿಶ್ ಮಾಡಿದ್ರು.