ಕರ್ನಾಟಕ

karnataka

ETV Bharat / sitara

ಮಹಾಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್‌ ಕೊಟ್ಟ ಹ್ಯಾಟ್ರಿಕ್​ ಹೀರೋ - ನಿರ್ದೇಶಕ ಹರ್ಷ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ 125ನೇ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ವೇದ ಅಂತಾ ಟೈಟಲ್ ಇಟ್ಟಿದ್ದು, ಈ ವೇದ ಚಿತ್ರದ ಮೊದಲ ಲುಕ್ ಅನಾವರಣ ಆಗಿದೆ.

Veda
ವೇದ

By

Published : Mar 11, 2021, 7:04 PM IST

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 35 ವರ್ಷಗಳನ್ನ ಪೂರೈಸಿದ ನಟ‌ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ಭಜರಂಗಿ 2 ಹಾಗೂ ಶಿವಪ್ಪ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಶಿವರಾತ್ರಿ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ 125ನೇ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ವೇದ ಅಂತಾ ಟೈಟಲ್ ಇಟ್ಟಿದ್ದು, ಈ ವೇದ ಚಿತ್ರದ ಮೊದಲ ಲುಕ್ ಅನಾವರಣ ಆಗಿದೆ.

ಶಿವರಾಜ್​ ಕುಮಾರ್​-ಹರ್ಷ

ವಿಶೇಷ ಅಂದ್ರೆ ಶಿವರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ವೇದ ಚಿತ್ರದ ಫಸ್ಟ್ ಲುಕ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ಯಾಂಡಲ್​​ವುಡ್​ನಲ್ಲಿ ವೇದ ಸಿನಿಮಾ ಪೋಸ್ಟರ್ ಹಾಗೂ ಟೈಟಲ್ ಸೌಂಡ್ ಮಾಡುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್​ನಲ್ಲಿ ಶಿವಣ್ಣ ವಯಸ್ಸಾದ ಲುಕ್​ನಲ್ಲಿ ಮಿಂಚಿದ್ದಾರೆ. ಸಿನಿಮಾದಲ್ಲೂ ಇದೇ ಗೆಟಪ್​​ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಅನಿಸುತ್ತೆ.

ಇನ್ನು ಶಿವರಾಜ್ ಕುಮಾರ್ ನಿರ್ದೇಶಕ ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದ ಚಿತ್ರಗಳೆಲ್ಲ ಭಜರಂಗಿ, ವಜ್ರಕಾಯ ಆಂಜನೇಯನ ಹೆಸರಿನಿಂದ ಕೂಡಿವೆ. ಈಗ ಇವರಿಬ್ಬರ ಕಾಂಬಿನೇಶನ್ ಇರುವ ನಾಲ್ಕನೇ ಚಿತ್ರಕ್ಕೆ ವೇದ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಟೈಟಲ್ ಯಾಕೆ ಅಂದ್ರೆ ಸಿನಿಮಾದಲ್ಲಿ ಶಿವಣ್ಣನ ಕ್ಯಾರೆಕ್ಟರ್ ಹೆಸರು ವೇದ ಅನ್ನೋದು ನಿರ್ದೇಶಕ ಹರ್ಷ ಮಾತಾಗಿದೆ.

ABOUT THE AUTHOR

...view details