ಡಾ. ರಾಜ್ಕುಮಾರ್ ಕುಟುಂಬದ ಮತ್ತೊಂದು ಕುಡಿ ಯುವ ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದು ತಿಳಿದ ವಿಚಾರ. ಯುವರಾಜ್ ಕುಮಾರ್ ನಟಿಸುತ್ತಿರುವ ಸಿನಿಮಾ ತಂಡ ಯುವ ನಂ 1 ಹೆಸರಲ್ಲಿ ಪೋಸ್ಟರ್ ರಿವೀಲ್ ಮಾಡಿತ್ತು. ಕೆಜಿಎಫ್ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಪುನೀತ್ ರುದ್ರನಾಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮಗನ ಬೆಂಬಲಕ್ಕೆ ನಿಂತ ಸೆಂಚುರಿ ಸ್ಟಾರ್ ಮತ್ತು ಪವರ್ ಸ್ಟಾರ್...! - Shivarajkumar liked yuva new video
ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ಕುಮಾರ್ ನಟಿಸಿರುವ ಮೊದಲ ಚಿತ್ರದ ಲಾಂಚಿಂಗ್ ವಿಡಿಯೋ ತಯಾರಾಗಿದ್ದು ಈ ವಿಡಿಯೋವನ್ನು ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ನೋಡಿ ಮೆಚ್ಚಿಕೊಂಡಿದ್ದಾರೆ.

ಯುವರಾಜ್ಕುಮಾರ್
ಚಿತ್ರದ ಪೋಸ್ಟರ್ ಸಖತ್ ಸದ್ದು ಮಾಡಿತ್ತು. ಇದೀಗ ಚಿತ್ರದ ಲಾಂಚಿಂಗ್ ವಿಡಿಯೋವೊಂದು ರೆಡಿಯಾಗಿದೆ. ಈ ವಿಡಿಯೋವನ್ನು ದೊಡ್ಡಪ್ಪ ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಪುನೀತ್ ರುದ್ರನಾಗ್ ಶಿವಣ್ಣ ಮನೆಗೆ ಭೇಟಿ ನೀಡಿ ಈ ವಿಡಿಯೋವನ್ನು ತೋರಿಸಿದ್ದಾರೆ. ಅದೇ ರೀತಿ ಪುನೀತ್ ರಾಜ್ಕುಮಾರ್ ಕೂಡಾ ವಿಡಿಯೋ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲ ಮಗನ ಟ್ಯಾಲೆಂಟ್ಗೆ ಫಿದಾ ಆಗಿದ್ದಾರೆ. ಅಕ್ಟೋಬರ್ನಲ್ಲಿ ಒಂದು ಅದ್ಧೂರಿ ಕಾರ್ಯಕ್ರಮ ಮಾಡಿ ಈ ವಿಡಿಯೋವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.