ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕುಲವಧುವಿನಲ್ಲಿ ಹಿರಿಮಗ ವೇದ್ ಆಗಿ ಅಭಿನಯಿಸಿದ್ದ ಶಿಶಿರ್ ಶಾಸ್ತ್ರಿ, ಪುಟ್ಟಗೌರಿ ಮದುವೆಯ ಶ್ಯಾಮ್ ಆಗಿ ಅಭಿನಯಿಸುವ ಮೂಲಕ ನಟನಾ ಪಯಣ ಆರಂಭಸಿದರು.
ಲಾಕ್‌ಡೌನ್ ಬಳಿಕ ಶೂಟಿಂಗ್ಗೆ ಎಂಟ್ರಿ ಕೊಟ್ಟ ನಟ ಶಿಶಿರ್ - ಸೇವಂತಿ ಧಾರಾವಾಹಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ ವೇದ್ ಆಗಿ ಬಣ್ಣ ಹಚ್ಚಿದ್ದ ಶಿಶಿರ್ ಲಾಕ್‌ಡೌನ್ ಬಳಿಕ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ..
ಲಾಕ್‌ಡೌನ್ ಬಳಿಕ ಶೂಟಿಂಗ್ಗೆ ಎಂಟ್ರಿ ಕೊಟ್ಟ ಶಿಶಿರ್
ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ರಾಘವನಾಗಿ ನಟಿಸಿದ್ದ ಶಿಶಿರ್ ಕುಲವಧು ಧಾರಾವಾಹಿಯ ವೇದ್ ಆಗಿ ಕರ್ನಾಟಕದಾದ್ಯಂತ ಮನೆ ಮಾತಾದರು.
ಕುಲವಧುವಿನ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸುತ್ತಿರುವ ಶಿಶಿರ್ ಶಾಸ್ತ್ರಿ ಎರಡು ತಿಂಗಳು ಕಾಲ ಕೊರೊನಾದಿಂದಾಗಿ ಶೂಟಿಂಗ್ ಇಲ್ಲದೇ ಮನೆಯಲ್ಲಿ ಕುಳಿತಿದ್ದರು. ಇದೀಗ ಕೊರೊನಾ ಲಾಕ್‌ಡೌನ್ ನಂತರ ಮತ್ತೆ ಶೂಟಿಂಗ್ ಆರಂಭಗೊಂಡಿದ್ದು, ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.