ಕರ್ನಾಟಕ

karnataka

ETV Bharat / sitara

ನಾವೀಗ ನಿಮ್ಮ ಪತಿ ಅರೆಸ್ಟ್​ ನ್ಯೂಸ್​ ನೋಡ್ಬೇಕಾ..ನಿಮ್ಮ ಸಿನಿಮಾ ನೋಡ್ಬೇಕಾ?: ನೆಟ್ಟಿಗರಿಂದ ಟ್ರೋಲ್​ಗೊಳಗಾದ ಶಿಲ್ಪಾ ಶೆಟ್ಟಿ

ಪತಿ ಬಂಧನದ ನಡುವೆಯೂ ತಮ್ಮ ಸಿನಿಮಾ ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ನಟಿ ಶಿಲ್ಪಾ ಶೆಟ್ಟಿಯನ್ನು ಇದೀಗ ನೆಟ್ಟಿಗರು ಸಖತ್​ ಟ್ರೋಲ್​ ಮಾಡುತ್ತಿದ್ದಾರೆ. ನಾವೀಗ ನಿಮ್ಮ ಪತಿ ಅರೆಸ್ಟ್​ ನ್ಯೂಸ್​ ನೋಡ್ಬೇಕಾ..ನಿಮ್ಮ ಸಿನಿಮಾ ನೋಡ್ಬೇಕಾ? ಎಂದು ಪ್ರಶ್ನಿಸಿದ್ದಾರೆ.

Hungama
ಶಿಲ್ಪಾ ಶೆಟ್ಟಿ

By

Published : Jul 24, 2021, 11:26 AM IST

ಹೈದರಾಬಾದ್​​: ಅತ್ತ ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಬಂಧನವಾಗಿದೆ. ಇತ್ತ ಶಿಲ್ಪಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಮಿಡಿ ಸಿನಿಮಾ ಹಂಗಮಾ- 2 ರಿಲೀಸ್​ ಆಗಿದೆ, ಅದನ್ನು ವೀಕ್ಷಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಬಳಿಕ ಶಿಲ್ಪಾ ಶೆಟ್ಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್​​ಗೆ ಒಳಗಾಗಿದ್ದಾರೆ.

ಬಹಳ ವರ್ಷಗಳ ನಂತರ ಬಾಲಿವುಡ್​ ಬೊಂಬೆ ಸಿನಿಮಾಗೆ ಕಮ್​ ಬ್ಯಾಕ್​ ಮಾಡಿದ್ದು, ಶಿಲ್ಪಾ ಅಭಿನಯದ ಕಾಮಿಡಿ ಮೂವಿ ಹಂಗಮಾ - 2, ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಪತಿ ಬಂಧನದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದ ಶಿಲ್ಪಾ ಶೆಟ್ಟಿ ಕುಂದ್ರಾ, 'ಜೀವಂತವಾಗಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ. ಈ ಹಿಂದೆಯೂ ನಾನು ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲೂ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೇನೆ. ನನ್ನ ಜೀವನವನ್ನು ಯಾವುದೂ ವಿಚಲಿತಗೊಳಿಸುವುದಿಲ್ಲ'' ಎಂದು ಬರೆದಿರುವ ಪುಸ್ತಕ ಫೋಟೋವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಅಲ್ಲದೇ ತಾನು ನಟಿಸಿರುವ ಹೊಸ ಸಿನಿಮಾ ವೀಕ್ಷಿಸುವಂತೆ ಕೋರಿದ್ದಾರೆ. ಈ ಚಿತ್ರವು ಅನೇಕ ಜನರ ಕಠಿಣ ಪರಿಶ್ರಮದ ಫಲ. ನನ್ನಿಂದ ಸಿನಿಮಾಕ್ಕೆ ತೊಂದರೆ ಆಗಬಾರದು ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:‘ನಾನು ನಿಮಗಾಗಿ ಬೆತ್ತಲಾಗುತ್ತೇನೆ’ ಎಂದು ಬರೆದು ನನ್ನ ನಂಬರ್ ಹರಿಬಿಟ್ಟರು: ರಾಜ್ ಕುಂದ್ರಾ ವಿರುದ್ಧ ಪೂನಂ ಆರೋಪ

ಹಂಗಾಮಾ 2 ನಲ್ಲಿ ಇಡೀ ತಂಡದ ಪ್ರಯತ್ನವಿದೆ. ಚಿತ್ರತಂಡ ಉತ್ತಮ ಸಿನಿಮಾ ಮಾಡಲು ಬಹಳಷ್ಟು ಶ್ರಮಿಸಿದೆ. ಚಲನಚಿತ್ರವು ತೊಂದರೆ ಅನುಭವಿಸಬಾರದು. ಆದ್ದರಿಂದ ಇಂದು, ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ವ್ಯಕ್ತಿಯ ಸಲುವಾಗಿ ನಿಮ್ಮ ಕುಟುಂಬಗಳೊಂದಿಗೆ ಚಿತ್ರ ವೀಕ್ಷಿಸಬೇಕೆಂದು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ" ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಸಿನಿಮಾಗೆ ತೊಂದರೆಯಾಗದಿರಲಿ: ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಈ ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣವೇ ನೆಟ್ಟಿಗರು ಆಕೆಯನ್ನು ಟ್ರೋಲ್​ ಮಾಡಿದ್ದಾರೆ. "ನಿಮ್ಮ ಪತಿ ಜೈಲಿನಲ್ಲಿದ್ದರೂ ಟ್ವಿಟರ್​​​​​​​ನಲ್ಲಿ ಸಿನಿಮಾ ಪ್ರಚಾರ ಮಾಡಲು ತುಂಬಾ ನಿರ್ಭಯರಾಗಿರಬೇಕು" ಎಂದು ಸೋಷಿಯಲ್​ ಮೀಡಿಯಾದಲ್ಲಿ ಒಬ್ಬರು ಬರೆದಿದ್ದಾರೆ.

ಇನ್ನೊಬ್ಬರು , "ರಾಜ್ ಕುಂದ್ರಾಗೆ ನೀವು ಎಲ್ಲಾ ಜ್ಞಾನ ಮತ್ತು ಎಲ್ಲಾ ಬೋಧನೆಗಳನ್ನು ಏಕೆ ನೀಡಲಿಲ್ಲ? ಬೆಂಕಿಯಿಲ್ಲದೇ ಯಾವುದೇ ಹೊಗೆ ಆಡುವುದಿಲ್ಲ. ಕ್ರಿಕೆಟ್ ಬೆಟ್ಟಿಂಗ್ / ವಂಚನೆ ಪ್ರಕರಣ ಮತ್ತು ಈಗ ಇದು. ನೀವು ಒಮ್ಮೆ ಬದುಕಿನಲ್ಲಿ ಒಂದು ಹಂತದವರೆಗೆ ಹೋರಾಡಿ ಈ ಮಟ್ಟಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ರು. ಆದರೆ, ಈಗ ಅದು ಬಹಿರಂಗಗೊಂಡಿದೆ. "ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:ರಾಜ್ ಕುಂದ್ರಾ ಬ್ಲೂ ಫಿಲಂ ದಂಧೆ: ಮುಂಬೈ ಪೊಲೀಸರಿಂದ ಶಿಲ್ಪಾ ಶೆಟ್ಟಿ ವಿಚಾರಣೆ

ಪ್ರತಿಯೊಬ್ಬರೂ ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ಬಯಸುತ್ತಾರೆ ಮತ್ತು ಈ ರೀತಿಯ ಅವ್ಯವಸ್ಥೆಗೆ ಸಿಲುಕುತ್ತಾರೆ "ಎಂದು ಮತ್ತೊಬ್ಬರು ಕಾಮೆಂಟ್‌ ಸೆಕ್ಷನ್​ನಲ್ಲಿ ಬರೆದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು" ಅಬ್ ಆಪ್ಕೆ ಪತಿ ಕಿ ನ್ಯೂಸ್ ದೇಖೆ ಯಾ ಹಂಗಮಾ 2 "ಎಂದು ಟ್ವೀಟ್ ಮಾಡಿದ್ದಾರೆ ( ನಾವೀಗ ನಿಮ್ಮ ಗಂಡನ ಸುದ್ದಿಯನ್ನು ನೋಡಬೇಕೇ, ಅಥವಾ ಹಂಗಮಾ 2 ಸಿನಿಮಾ ನೋಡಬೇಕೆ?) " ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details