ಸುದ್ದಿ ವಾಚಕಿಯಾಗಿ ಕೆಲಸ ಆರಂಭಿಸಿದ್ದ ಶೀತಲ್ ಶೆಟ್ಟಿ ನಂತರ ಸಿನಿಮಾಗಳಲ್ಲಿ ಕೂಡಾ ನಟಿಸಲು ಆರಂಭಿಸಿದರು. ಬಿಗ್ಬಾಸ್ಗೆ ಕೂಡಾ ಹೋಗಿ ಬಂದ್ರು. ಇದೀಗ ಅವರು ನಿರೂಪ್ ಭಂಡಾರಿ ಜೊತೆ 'ವಿಂಡೋ ಸೀಟ್'ನಲ್ಲಿ ಕೂತಿದ್ಧಾರೆ.
ಶೀತಲ್ ಶೆಟ್ಟಿ ಎಲ್ಲಿಗಾದರೂ ಟ್ರಿಪ್ ಹೋಗ್ತಿರಬಹುದು ಎಂದುಕೊಳ್ಳಬೇಡಿ. 'ವಿಂಡೋ ಸೀಟ್' ಎನ್ನುವುದು ಸಿನಿಮಾ ಹೆಸರು. ಶೀತಲ್ ಶೆಟ್ಟಿ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ವಿಶೇಷ ಎಂದರೆ ಈಗ ಅವರು ನಿರ್ದೇಶನಕ್ಕೂ ಕೈ ಹಾಕಿದ್ಧಾರೆ. 'ವಿಂಡೋ ಸೀಟ್' ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೊಮ್ಯಾಂಟಿಕ್, ಥ್ರಿಲ್ಲರ್ ಕಥೆ ಹೊಂದಿರುವ 'ವಿಂಡೋ ಸೀಟ್' ಚಿತ್ರಕ್ಕೆ ಶೀತಲ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ. 'ರಂಗಿ ತರಂಗ' ಖ್ಯಾತಿಯ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ನಟಿಸಿದ್ದಾರೆ.