ಈ ಮುನ್ನ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಶೀತಲ್ ಶೆಟ್ಟಿ ನಂತರ ಸಿನಿಮಾಗಳ ಕಡೆ ಒಲವು ತೋರಿದರು. 2014 ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 'ಉಳಿದವರು ಕಂಡಂತೆ' ಚಿತ್ರದ ಮೂಲಕ ತಮ್ಮ ಸಿನಿ ಕರಿಯರ್ ಆರಂಭಿಸಿದರು ಶೀತಲ್.
ಶೀತಲ್ ಶೆಟ್ಟಿ, ಕಾರುಣ್ಯರಾಮ್ ಅಭಿನಯದ ಸಿನಿಮಾ ಶೀಘ್ರದಲ್ಲಿ ತೆರೆಗೆ - ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರಣಭೂಮಿ ಸಿನಿಮಾ
'ರಣಭೂಮಿ' ಎಂಬ ಹೊಸ ಚಿತ್ರದ ಮೂಲಕ ಶೀತಲ್ ಶೆಟ್ಟಿ ಆಗಮಿಸುತ್ತಿದ್ದಾರೆ. ನಟಿ ಕಾರುಣ್ಯ ರಾಮ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದು 'ಮಾನಸಿ ಫಿಲ್ಮ್' ಬ್ಯಾನರ್ ಅಡಿ ಈ ಸಿನಿಮಾವನ್ನು ತಯಾರಿಸಲಾಗಿದೆ.
ನಂತರ 'ಕೆಂಡಸಂಪಿಗೆ' ಲಿಫ್ಟ್ ಮ್ಯಾನ್, ಎಸ್ಕೇಪ್, ಚೇಸ್, ಅರ್ಜುನ ಸಿನಿಮಾಗಳಲ್ಲಿ ನಟಿಸಿದರು. ಆದರೆ 'ಪತಿ ಬೇಕು.ಕಾಂ' ನಂತರ ಬೇರೆ ಯಾವ ಸಿನಿಮಾಗಳನ್ನೂ ಅವರು ಒಪ್ಪಿಕೊಳ್ಳಲಿಲ್ಲ. ಇದೀಗ 'ರಣಭೂಮಿ' ಎಂಬ ಹೊಸ ಚಿತ್ರದ ಮೂಲಕ ಶೀತಲ್ ಶೆಟ್ಟಿ ಆಗಮಿಸುತ್ತಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ನಟಿ ಕಾರುಣ್ಯ ರಾಮ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. 'ಮಾನಸಿ ಫಿಲ್ಮ್' ಬ್ಯಾನರ್ ಅಡಿ ಈ ಸಿನಿಮಾವನ್ನು ತಯಾರಿಸಲಾಗಿದೆ. 45 ದಿವಸಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಶೀಘ್ರವೇ ಸಿನಿಮಾ ತೆರೆ ಕಾಣಲಿದೆ.
'ರಣಭೂಮಿ' ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಚಿರಂಜೀವಿ ದೀಪಕ್ ಅವರದ್ದು. ಈ ಹಿಂದೆ ಇವರು ‘ಜೋಕಾಲಿ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರದ ಸಹ ನಿರ್ಮಾಪಕ ಆಗಿ ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಜೊತೆಯಾಗಿದ್ದಾರೆ. 'ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು' ಎಂಬುದು ಈ ಸಿನಿಮಾದ ಉಪಶೀರ್ಷಿಕೆ. ಇದೊಂದು ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾ. ಪ್ರದೀಪ್ ವರ್ಮಾ ಸಂಗೀತ, ವಿಜಯ ಭರಮಸಾಗರ ಸಾಹಿತ್ಯ, ನಾಗಾರ್ಜುನ್ ಛಾಯಾಗ್ರಹಣ, ವೆಂಕಿ ಅವರ ಸಂಕಲನ ಈ ಚಿತ್ರಕ್ಕಿದೆ. ನಿರಂಜನ್ ಒಡೆಯರ್, ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಆರ್. ಭಟ್, ರಥಾವರ ಲೋಕಿ, ಡೇನಿಯಲ್ ಕುಟ್ಟಪ್ಪ, ಮುನಿ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.