ಕರ್ನಾಟಕ

karnataka

ETV Bharat / sitara

ದುರಂತ ರಾಣಿ ಮೀನಾಕುಮಾರಿಯ 47ನೇ ವಾರ್ಷಿಕ ಸ್ಮರಣೋತ್ಸವ.. - ದುರಂತ ರಾಣಿ ಮೀನಾ ಕುಮಾರಿ

ಸಾಹೀಬ್ ಬೀಬಿ ಔರ್ ಗುಲಮ್, ಬೈಜು ಬಾವ್ರಾ, ಪಕೀಜಾ, ಕೊಹಿನೂರ್ ಮತ್ತು ಆರಾಧನಾ ಚಿತ್ರ ಸೇರಿ ಮೀನಾ ಅವರ ಹಲವಾರು ಚಲನಚಿತ್ರಗಳನ್ನು ನೋಡಿ ನಾನು ಮತ್ತು ದಿವಂಗತ ನಟ ವಿನೋದ್ ಖನ್ನಾ" ನಟಿಸಲು ಕಲಿತ ಅದೃಷ್ಟಶಾಲಿಗಳು" ಎಂದು ಸಿನ್ಹಾ ಅಭಿಮಾನದ ಮಾತನ್ನಾಡಿದರು.

shatrughan-sinha-remembers-meena-kumari-on-her-death-anniversary
ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಮೀನಾ ಕುಮಾರಿ

By

Published : Mar 31, 2020, 7:28 PM IST

ಮುಂಬೈ: ಅನನ್ಯ ಧ್ವನಿ ಹಾಗೂ ಹಾವ-ಭಾವದ ಅಭಿನಯದ ವಿಶೇಷ ಶೈಲಿಯಿಂದ ಗಮನ ಸೆಳೆದ ನಟಿ ಮೀನಾ ಕುಮಾರಿ. ಅವರು ಹಿಂದಿ ಚಿತ್ರ ರಂಗದ ದುರಂತ ರಾಣಿ ಎಂದು ನಟ ಕಮ್‌ ರಾಜಕಾರಣಿ ಶತ್ರುಘ್ನ ಸಿನ್ಹಾ ಅಭಿಪ್ರಾಯಪಟ್ಟರು.

ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಮೀನಾ ಕುಮಾರಿ

ದುರಂತ ರಾಣಿ ಮೀನಾ ಕುಮಾರಿ ಅವರ 47ನೇ ಸ್ಮರಣ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಟನಾಗಿ ನಂತರ ರಾಜಕಾರಣಕ್ಕೆ ಪಾದಾರ್ಪಣೆ ಬೆಳೆಸಿದ ಶತ್ರುಘ್ನ ಸಿನ್ಹಾ ಮಂಗಳವಾರ ಗೌರವ ಸಲ್ಲಿಸಿ ಮಾತನಾಡಿದರು.

ಸಾಹೀಬ್ ಬೀಬಿ ಔರ್ ಗುಲಮ್, ಬೈಜು ಬಾವ್ರಾ, ಪಕೀಜಾ, ಕೊಹಿನೂರ್ ಮತ್ತು ಆರಾಧನಾ ಚಿತ್ರ ಸೇರಿ ಮೀನಾ ಅವರ ಹಲವಾರು ಚಲನಚಿತ್ರಗಳನ್ನು ನೋಡಿ ನಾನು ಮತ್ತು ದಿವಂಗತ ನಟ ವಿನೋದ್ ಖನ್ನಾ" ನಟಿಸಲು ಕಲಿತ ಅದೃಷ್ಟಶಾಲಿಗಳು" ಎಂದು ಸಿನ್ಹಾ ಅಭಿಮಾನದ ಮಾತನ್ನಾಡಿದರು.

"ಜೀವಮಾನವಿಡೀ ಅಳವಡಿಕೊಳ್ಳುವಂತ ಸದಾ ಹಚ್ಚಹಸಿರಾಗಿ ಉಳಿಯುವಂತ ಚಲನಚಿತ್ರಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಇದರಿಂದಲೇ ಅವರು 1950 ಮತ್ತು 1960ರ ದಶಕಗಳಲ್ಲಿ ಅತ್ಯುತ್ತಮ ಮಹಿಳಾ ನಟಿಗಾಗಿ ನೀಡುವ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ನಾಲ್ಕು ಬಾರಿ ಗಳಿಸಿಕೊಂಡಿದ್ದಾರೆ ಎಂದರು. 92ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಭಾವಯುತ ನಟನೆ ಮೂಲಕ ಜನ ಸಾಮಾನ್ಯರ, ಕಲಾಸಕ್ತರ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

"ಆಕರ್ಷಕ ನಟನೆ ಅಷ್ಟೇ ಅಲ್ಲ, ಕವಯತ್ರಿಯು ಆಗಿದ್ದ ದುರಂತ ರಾಣಿ ಮೀನಾ ಕುಮಾರಿ ಅವರಿಗೆ ಗೌರವ ನಮನಗಳು. ಅವರು ವಿಶಿಷ್ಟ ಧ್ವನಿ ಮತ್ತು ಸಂಭಾಷಣೆ ವ್ಯಕ್ತಪಡಿಸುವ ಚಾತುರ್ಯತೆ ಹೊಂದಿದ್ದರು" ಎಂದು ನಟ 'ನಸೀಬ್' ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ABOUT THE AUTHOR

...view details