ಕರ್ನಾಟಕ

karnataka

ETV Bharat / sitara

ಪ್ರಚಂಡ ಪುಟಾಣಿಗಳ ಜೊತೆಯಾದ ಸುಪ್ರೀಮ್ ಹೀರೋ ಶಶಿಕುಮಾರ್ - Shashikumar new movie

ಡಿ ಆ್ಯಂಡ್​​​​​​​​​​​​​ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಜೀವ್ ಕೃಷ್ಣ ನಿರ್ದೇಶನದ ಪ್ರಚಂಡ ಪುಟಾಣಿಗಳು' ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಿರಿಯ ನಟ ಶಶಿಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Supreme hero Shashikumar
ಸುಪ್ರೀಮ್ ಹೀರೋ ಶಶಿಕುಮಾರ್

By

Published : Aug 19, 2020, 11:10 AM IST

ಸುಪ್ರೀಮ್ ಹೀರೋ ಶಶಿಕುಮಾರ್ 'ಪ್ರಚಂಡ ಪುಣಾಣಿಗಳು' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಡಿ ಆ್ಯಂಡ್​​​​​​​​​​​​​ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಪದ್ಮಾವತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಪ್ರಚಂಡ ಪುಟಾಣಿಗಳು' ಚಿತ್ರೀಕರಣ ಮುಕ್ತಾಯಗೊ೦ಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ನಿಧಿಗಾಗಿ ಮಕ್ಕಳನ್ನು ಬಲಿ ಕೊಡುವಾಗ, ಅಲ್ಲಿಗೆ ಬರುವ ಶಶಿಕುಮಾರ್ ಮಕ್ಕಳನ್ನು ಕಾಪಾಡುತ್ತಾರೆ. 'ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ, ಸಂಹಾರವೇ..' ಎನ್ನುತ್ತಾ ಖಳನಟರಾದ ಬಲರಾಮ್ ಪಂಚಾಲ್, ಕೋಲಾರ್ ಬಾಲು ,ನಿಡುವಳ್ಳಿ ರೇವಣ್ಣ, ಗುರು ಪ್ರಸನ್ನ ಮೊದಲಾದವರನ್ನು ಸದೆಬಡಿಯುವ ಸಾಹಸ ದೃಶ್ಯಗಳೊಂದಿಗೆ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯ್ತು.

ಸುಪ್ರೀಮ್ ಹೀರೋ ಶಶಿಕುಮಾರ್

ಕೋಲಾರ, ಚಿಂತಾಮಣಿ, ಅಂತರಗಂಗೆ, ಕೈಲಾಸಗಿರಿ ಮೊದಲಾದ ಸುಂದರ ತಾಣಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಅವಿನಾಶ್, ಶೋಭರಾಜ್, ಶಶಿಕುಮಾರ್​, ಬಲರಾಂ ಪಂಚಾಲ್ ಪುಟಾಣಿಗಳಾದ ಬೇಬಿ ಸುಪ್ರಿತಾ ರಾಜ್, ಬೇಬಿ ಅಂಕಿತಾ, ಮಾಸ್ಟರ್ ಧ್ರುವ ಸೇರಿ ಸುಮಾರು 50 ಮಂದಿ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

'ಪ್ರಚಂಡ ಪುಟಾಣಿಗಳು' ಚಿತ್ರಕ್ಕೆ ವಿನು ಮನಸು ಸಂಗೀತವಿದ್ದು ಸುರೇಶ್ ಕಂಬಳಿ ಸಾಹಿತ್ಯ , ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ, ಸಾಹಸ ಹಾಗೂ ನಿರ್ದೇಶನವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಕೋಲಾರ್ ಸುಮಂತ್ ಸ್ಥಿರಚಿತ್ರಣ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಇರುವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು ಥಿಯೇಟರ್​​​ಗಳು ತೆರೆದ ಕೂಡಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ABOUT THE AUTHOR

...view details