ಈಗಾಗಲೇ 480 ಹಾಡುಗಳನ್ನು ಹೇಳಿರುವ ಅವರು, ಸಂಗೀತ ಕ್ಷೇತ್ರದಲ್ಲಿ ಅಪ್ಪ ಕಂಡ ಕನಸು ಸಾಕಾರಗೊಳಿಸುತ್ತಿದ್ದಾರೆ. ಇವರ ತಂದೆ ಶೇಷಗಿರಿ ಹಾಡುಗಾರ ಆಗಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟವರು. ಅವರ ಅಸೆ ಈಡೇರಲಿಲ್ಲ. ಆದರೆ, ಇಂದು ಅವರ ಮಗ ಶಶಾಂಕ್ ಕನ್ನಡ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾರೆ.
2000 ಇಂದ ವೃತ್ತಿ ಆರಂಭಿಸಿದ ಶಶಾಂಕ್ 480 ಕನ್ನಡ ಸಿನಿಮಾ ಹಾಡು ಹೇಳಿದ್ದಾರೆ. ಅವರ ಪಟ್ಟಿಯಲ್ಲಿ ಇನ್ನೂ 150 ಹಾಡುಗಳು ಇವೆ. ಆದರೆ, 500 ನೇ ಹಾಡು ಮಾತ್ರ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಕ್ಕೆ ಮೀಸಲಿಟ್ಟಿರುವುದಾಗಿ ಹೇಳುತ್ತಾರೆ ಶಶಾಂಕ್.