ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ ಚುರುಕುಗೊಂಡಿದ್ದು ವಿಚಾರಣೆಗೆ ಹಾಜರಾಗದ ನಟಿ ರಾಗಿಣಿ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿರುವ ಅಧಿಕಾರಿಗಳು ರಾಗಿಣಿ ಅವರಿಂದ ಪೋನ್, ಲ್ಯಾಪ್ಟಾಪ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶರ್ಮಿಳಾ ಮಾಂಡ್ರೆ ಟ್ವೀಟ್ ಮತ್ತೊಂದೆಡೆ ನಟಿ ಶರ್ಮಿಳಾ ಮಾಂಡ್ರೆ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. 'ನಾನು ಸುಮ್ಮನೆ ಇದ್ದೇನೆ ಎಂದ ಮಾತ್ರಕ್ಕೆ ತಪ್ಪು ಮಾಡಿದ್ದೇನೆ ಎಂದು ಅರ್ಥವಲ್ಲ. ನಾನು ಮೌನವಾಗಿರುವುದರಿಂದಲೇ ನನ್ನ ಬಗ್ಗೆ ಪ್ರತಿದಿನ ಆಧಾರ ರಹಿತ ವಿಚಾರಗಳನ್ನು ಪ್ರಕಟಿಸುತ್ತಿದ್ದೀರಿ. ಇದೆಲ್ಲಾ ಟಿಆರ್ಪಿಗೋಸ್ಕರ ಮಾಡಲಾಗುತ್ತಿದೆ. ಮಾಧ್ಯಮದವರ ವಿರುದ್ಧ ನಾನು ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ'.
ಶರ್ಮಿಳಾ ಮಾಂಡ್ರೆ ಟ್ವೀಟ್ 'ನಾನು ಯಾವ ಪ್ರಕರಣಗಳಲ್ಲೂ ಭಾಗಿಯಾಗಿಲ್ಲ. ನನ್ನ ತಾತ, ತಂದೆಗೆ ಸಮಾಜದಲ್ಲಿ ಒಳ್ಳೆ ಗೌರವ ಇದೆ. ನಾನು ಕೂಡಾ ಬಹಳ ಶ್ರಮ ಪಟ್ಟು ಚಿತ್ರರಂಗದಲ್ಲಿ ಒಳ್ಳೆ ಸ್ಥಾನ ಗಳಿಸಿದ್ದೇನೆ. ಅನಾವಶ್ಯಕವಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ಮಾಡಲಾಗುತ್ತಿದೆ. ಆದರೆ ನಾನು ಇದರಲ್ಲಿ ಭಾಗಿಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಮಾಧ್ಯಮದಲ್ಲಿ ನನ್ನ ಬಗ್ಗೆ ಪ್ರಕಟವಾಗುತ್ತಿರುವ ಸುದ್ದಿಗಳನ್ನು ನೋಡುತ್ತಿದ್ದರೆ ಬಹಳ ಬೇಸರವಾಗುತ್ತಿದೆ' ಎಂದು ಶರ್ಮಿಳಾ ಮಾಂಡ್ರೆ ಟ್ವೀಟ್ ಮಾಡಿದ್ದಾರೆ.
ಶರ್ಮಿಳಾ ಮಾಂಡ್ರೆ ಟ್ವೀಟ್ ಏಪ್ರಿಲ್ನಲ್ಲಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾಗಿತ್ತು. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮುಂಜಾನೆ 3 ಗಂಟೆಗೆ ಶರ್ಮಿಳಾ ಮಾಂಡ್ರೆ ಹೊರಗೆ ಬಂದು ವಸಂತನಗರದ ಬಳಿ ಅಂಡರ್ಪಾಸ್ಗೆ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಶರ್ಮಿಳಾ ಮಾಂಡ್ರೆ ಹಾಗೂ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ಹೈಗ್ರೌಂಡ್ ಪೊಲೀಸರು ಶರ್ಮಿಳಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದ್ದರು.
ಶರ್ಮಿಳಾ ಮಾಂಡ್ರೆ ಟ್ವೀಟ್ ಅಪಘಾತ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆಯುತ್ತಿದ್ದಂತೆ ಶರ್ಮಿಳಾ ಹೆಸರು ಡ್ರಗ್ಸ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು. ವಿಚಾರಣೆ ಭಯಕ್ಕೆ ಶರ್ಮಿಳಾ ಮಾಂಡ್ರೆ ತನಗೆ ಹಾಗೂ ಕುಟುಂಬದವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದರಿಂದ ಕೋಪಗೊಂಡಿರುವ ಶರ್ಮಿಳಾ ಮಾಂಡ್ರೆ, ನನ್ನ ಬಗ್ಗೆ ಆರೋಪ ಮಾಡಿರುವವರ ಮೇಲೆ ಹಾಗೂ ಆಧಾರ ರಹಿತ ಸುದ್ದಿ ಪ್ರಕಟಿಸಿದ್ದಕ್ಕೆ ಮಾಧ್ಯಮದವರ ಮೇಲೆ ಕೇಸ್ ಹಾಕುತ್ತೇನೆ ಎಂದು ಬರೆದುಕೊಂಡಿದ್ದಾರೆ.