ಕರ್ನಾಟಕ

karnataka

ETV Bharat / sitara

'ಶಾರ್ದೂಲ' ಚಿತ್ರಕ್ಕೆ ಪ್ರಮಾಣ ಪತ್ರ ನೀಡಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ - Shardula movie got UA certificate

ಸೆನ್ಸಾರ್ ಮಂಡಳಿ ಸಿನಿಮಾಗಳನ್ನು ವೀಕ್ಷಿಸಿ ಪ್ರಮಾಣ ಪತ್ರ ನೀಡುತ್ತಿದ್ದು ಇದೀಗ 'ಶಾರ್ದೂಲ' ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಿದೆ. ಕೊರೊನಾ ತೊಂದರೆಯಿಂದ ಸಿನಿಮಾ ಬಿಡುಗಡೆ ತಡವಾಗಿದ್ದು ಕೂಡಲೇ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

Shardula movie got UA certificate
'ಶಾರ್ದೂಲ'

By

Published : Jun 9, 2020, 12:26 PM IST

ಜೂನ್ 1 ರಿಂದ ಸೆನ್ಸಾರ್ ಮಂಡಳಿ ದಿನಕ್ಕೊಂದು ಕನ್ನಡ ಸಿನಿಮಾ ವೀಕ್ಷಿಸಿ ಸೆನ್ಸಾರ್ ಅನುಮತಿ ಪತ್ರ ನೀಡುತ್ತಿದೆ. ಮೂಕ ಜೀವ, ಶಾರ್ದೂಲ, ಮೇಲೊಬ್ಬ ಮಾಯಾವಿ....ಹೀಗೆ ಕೆಲವು ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಅನುಮತಿ ನೀಡಿದೆ. ಚಿತ್ರಗಳ ಪಟ್ಟಿ ದೊಡ್ಡದಾಗಿರುವುದರಿಂದ ಸೆನ್ಸಾರ್ ಇನ್ನು ಮುಂದೆ ದಿನಕ್ಕೆ 2 ಸಿನಿಮಾಗಳನ್ನು ನೋಡಿ ಅನುಮತಿ ನೀಡಲಿದೆಯಂತೆ.

'ಶಾರ್ದೂಲ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಭೈರವ ಸಿನಿಮಾಸ್ ಲಾಂಛನದಡಿ ಕಲ್ಯಾಣ್​​​​​​. ಸಿ ಹಾಗೂ ರೋಹಿತ್​​​​​​. ಎಸ್ ನಿರ್ಮಿಸಿರುವ 'ಶಾರ್ದೂಲ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೊನಾ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ‌ದೊರೆತ ಕೂಡಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

'ಶಾರ್ದೂಲ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್​​ ಕೂಡಾ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. 'ನಮ‌್ ಏರಿಯಾಲ್ಲೊಂದು‌ ದಿನ', 'ತುಘಲಕ್' ಹಾಗೂ 'ಹುಲಿರಾಯ' ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೈ.ಜಿ.ಆರ್​. ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗೂ ಮಾಸ್ ಮಾದ, ಅಲ್ಟಿಮೇಟ್ ಶಿವ ಅವರ‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

'ಶಾರ್ದೂಲ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಪಿಯುಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕಾ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಮೆಜಾನ್​​​​​​ ಪ್ರೈಂ ಮತ್ತು ನೆಟ್​​​ಫ್ಲಿಕ್ಸ್​ ಸಂಸ್ಥೆಗಳಿಗೂ ಚಿತ್ರವನ್ನು ಕಳಿಸಿಕೊಡಲಾಗಿದ್ದು ಒಟಿಟಿ ಪ್ಲಾಟ್​​​​ಫಾರ್ಮ್​ನಲ್ಲೂ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ನಿರ್ಮಾಪಕರು.

'ಶಾರ್ದೂಲ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ABOUT THE AUTHOR

...view details