ಕರ್ನಾಟಕ

karnataka

ETV Bharat / sitara

ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ ಶಾರ್ದೂಲ ಸಿನಿಮಾ! - ನಟ ಚೇತನ್​ ಚಂದ್ರ

ಹಾರಾರ್ ಸಸ್ಪೆನ್ಸ್ ಕಥೆ ಆಧಾರಿತ ಶಾರ್ದೂಲ ಚಿತ್ರ ಇದೇ ಆ.20ಕ್ಕೆ ಬಿಡುಗಡೆಯಾಗಲಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಮಾಹಿತಿ ನೀಡಿದೆ.

Shardula film team
ಶಾರ್ದೂಲ ಚಿತ್ರತಂಡ

By

Published : Aug 13, 2021, 8:39 PM IST

ಕೊರೊನಾ ಹಾವಳಿಗೆ ತತ್ತರಿದ್ದ ಕನ್ನಡ ಚಿತ್ರರಂಗ ಕೊಂಚ ಸುಧಾರಣೆ ಕಾಣುತ್ತಿದೆ. ಇದರಿಂದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಈ ತಿಂಗಳ ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ಸಿನಿಮಾಗಳು ತೆರೆ ಕಾಣಲು ರೆಡಿಯಾಗಿವೆ. ಆ ಸಾಲಿನಲ್ಲಿ ಹಾರಾರ್ ಸಸ್ಪೆನ್ಸ್ ಕಥೆ ಆಧಾರಿತ ಶಾರ್ದೂಲ ಚಿತ್ರ ಕೂಡ ಒಂದಾಗಿದೆ. ‌

ಇಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಕುರಿತಂತೆ ಅನುಭವವನ್ನು ಹಂಚಿಕೊಂಡರು. ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಅಭಿನಯಿಸಿರುವ ಎಲ್ಲ ಕಲಾವಿದರ ಅಭಿನಯವೂ ಅದ್ಭುತವಾಗಿದೆ. ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ಜನರಿಗೆ ಉತ್ತಮ ಮನೋರಂಜನೆ ನೀಡಲು ಇದೇ ಆ.20ರಂದು ಶಾರ್ದೂಲ ಚಿತ್ರ ಬಿಡುಗಡೆ ಆಗುತ್ತಿದೆ. ಇದೊಂದು ಪಕ್ಕಾ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಚಿತ್ರದ ನಾಯಕ ಚೇತನ್ ಚಂದ್ರ ಹೇಳಿದರು.

ಚಿತ್ರದ ಅನುಭವ ಹಂಚಿಕೊಂಡ ಶಾರ್ದೂಲ ಚಿತ್ರತಂಡ

ತುಂಬಾ ಹೆದರಿಕೆಯುಳ್ಳ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ದೀಕ್ಷಾ ಎನ್ನುವುದು ನನ್ನ ಪಾತ್ರದ ಹೆಸರು. ಈ ಸಿನಿಮಾ ನನ್ನ ಕೆರಿಯರ್​​​ಗೆ ಮುಖ್ಯವಾದ ಚಿತ್ರ ಎಂದು ನಟಿ ಕೃತಿಕಾ ರವೀಂದ್ರ ಹೇಳಿದರು.

ರಾಬರ್ಟ್ ಖ್ಯಾತಿಯ ಐಶ್ವರ್ಯ ಪ್ರಸಾದ್ ಮಾತನಾಡಿ, ಆ ಚಿತ್ರದ ಪಾತ್ರಕ್ಕೂ, ಈ ಚಿತ್ರದ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಕೃತಿಕಾ ಅವರದು ಹೆದರಿಕೊಳ್ಳುವ ಪಾತ್ರವಾದರೆ, ನನ್ನದು ಬೋಲ್ಡ್ ಹುಡುಗಿ ಪಾತ್ರ ಎಂದರು.

ಇನ್ನು ಈ ಚಿತ್ರವನ್ನು ನಮ್​ ಏರಿಯಾದಲ್ಲೊಂದು‌ ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಸಿನಿಮಾವನ್ನು ನಿರ್ದೇಶಿಸಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ದೆವ್ವ ಇರಬಹುದಾ? ಎಂಬ ಅಡಿಬರಹ ನೀಡಿದ್ದಾರೆ.

ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದು, ವೈ.ಜಿ.ಆರ್ ಮನು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಹಾಗೂ ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಭೈರವ ಸಿನಿಮಾಸ್ ಮತ್ತು ಸಿವಿಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಸಿ. ಕಲ್ಯಾಣ್ ನಿರ್ಮಿಸಿದ್ದಾರೆ.

ಶಾರ್ದೂಲ ಚಿತ್ರತಂಡ

ಈ ವೇಳೆ ನಟರಾದ ಚೇತನ್ ಚಂದ್ರ, ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ನಿರ್ಮಾಪಕ ಕಲ್ಯಾಣ್, ರೋಹಿತ್ ಶಾಂತಪ್ಪ, ನಿರ್ಮಾಪಕ ಭಾ.ಮ.ಹರೀಶ್, ಭಾ.ಮ.ಗಿರೀಶ್, ರಿವೈಂಡ್ ಖ್ಯಾತಿಯ ತೇಜ್ ಮೊದಲದವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಯಿಸಿದ್ದಾರೆ.

ABOUT THE AUTHOR

...view details