ನಾಯಕ ಯಾರೇ ಇರಲಿ, ನಿರ್ದೇಶಕ ಯಾರೇ ಇರಲಿ. ಇವರು ಆ ಸಿನಿಮಾದಲ್ಲಿ ನಾಯಕನಾಗಿ ಅಪ್ಪನಾಗಿ ನಟಿಸುತ್ತಿದ್ದಾರೆ ಅಂದ್ರೆ ಅಲ್ಲೊಂದು ಪಾಸಿಟಿವ್ ಎನರ್ಜಿ ಇರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾರಥಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ, ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ.
ಸಾರಥಿ, ರಾಜಕುಮಾರನಿಗೂ ಇವರೇ ಡ್ಯಾಡಿ... ರೆಮೋಗೂ ಇವರೇ ಅಪ್ಪ! - Sharat kumar acting in Raymo movie
ಸಾಲ್ಟ್ ಅ್ಯಂಡ್ ಪೆಪ್ಪರ್ ಲುಕ್ನಲ್ಲಿ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಲುಕ್ನಲ್ಲಿ ಶರತ್ ಮಿಂಚಿದ್ದಾರೆ. ಶರತ್ ಕುಮಾರ್ ಹಾಗೂ ಇಶಾನ್ ಅಪ್ಪ-ಮಗ ಕಾಂಬಿನೇಶನ್ನ ಒಂದಷ್ಟು ಕಲರ್ಫುಲ್ ದೃಶ್ಯಗಳನ್ನು ನಿರ್ದೇಶಕ ಪವನ್ ಒಡೆಯರ್ ಇತ್ತೀಚೆಗೆ ಚಿತ್ರೀಕರಿಸಿಕೊಂಡರು.

ಆ ಚಾರ್ಮಿಂಗ್, ಸ್ಟೈಲಿಶ್, ಹ್ಯಾಂಡ್ಸಮ್ ಡ್ಯಾಡಿ ಶರತ್ ಕುಮಾರ್ ಮತ್ತೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಪವನ್ ಒಡೆಯರ್ ನಿರ್ದೇಶನದ 'ರೇಮೋ' ಚಿತ್ರದಲ್ಲಿ ನಾಯಕ ಇಶಾನ್ಗೆ ಶರತ್ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ತಂಡ ಸೇರಿರುವ ಶರತ್, ಸಾಲ್ಟ್ ಅ್ಯಂಡ್ ಪೆಪ್ಪರ್ ಲುಕ್ನಲ್ಲಿ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಲುಕ್ನಲ್ಲಿ ಮಿಂಚಿದ್ದಾರೆ. ಶರತ್ ಕುಮಾರ್ ಹಾಗೂ ಇಶಾನ್ ಅಪ್ಪ-ಮಗ ಕಾಂಬಿನೇಶನ್ನ ಒಂದಷ್ಟು ಕಲರ್ಫುಲ್ ದೃಶ್ಯಗಳನ್ನು ನಿರ್ದೇಶಕ ಪವನ್ ಒಡೆಯರ್ ಇತ್ತೀಚೆಗೆ ಚಿತ್ರೀಕರಿಸಿಕೊಂಡರು. ಚಿತ್ರದ ಕೆಲವು ಮೇಕಿಂಗ್ ಸ್ಟಿಲ್ಗಳು ಕೂಡಾ ಬಿಡುಗಡೆಯಾಗಿವೆ.
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನು ಅದ್ದೂರಿ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮತ್ತು ಸಿ.ಆರ್.ಗೋಪಿ ನಿರ್ಮಿಸುತ್ತಿದ್ದಾರೆ. ಇಶಾನ್ಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಲವ್ ಸಿನಿಮಾಗಳನ್ನು ನೀಡುವಲ್ಲಿ ನಿಪುಣ ಎನಿಸಿಕೊಂಡ ಪವನ್ ಒಡೆಯರ್, 'ರೇಮೊ' ಚಿತ್ರವನ್ನು ಟ್ರೆಂಡಿಯಾಗಿ ಮಾಡಲು ಹೊರಟಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಮತ್ತಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.