ಸ್ಯಾಂಡಲ್ ವುಡ್ ನಲ್ಲಿ ಪೈಸಾ ವಸೂಲು ಹೀರೋ ಆಗಿ ಹೊರ ಹೊಮ್ಮಿರುವ ನಟ ಶರಣ್. ಕೆಲವು ದಿನಗಳ ಹಿಂದೆ ಶರಣ್ ಬರೀ ಸೀಟಿ ಮೂಲಕ ಉತ್ತರಿಸುವ ವಿಡಿಯೋ ಒಂದು ವೈರಲ್ ಆಗಿತ್ತು.
ಶರಣ್ ಅಮ್ಮಂದಿರ ಮಾತಿಗೆ ಉತ್ತರಿಸದೇ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು. ಆ ಸಿನಿಮಾ ಯಾವುದು ಅನ್ನೋದು ಗಾಂಧಿನಗರ ಅಲ್ಲದೇ ಶರಣ್ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅದುವೇ ಶರಣ್ ಅಭಿನಯಿಸುತ್ತಿರೋ ಹೊಸ ಸಿನಿಮಾದ ಟೈಟಲ್.
ಹೌದು, 1995ರಲ್ಲಿ ದ್ವಾರಕೀಶ್ ನಿರ್ಮಾಣದ ಹಾಗೂ ಅಭಿನಯದ ಚಿತ್ರ ಗುರು ಶಿಷ್ಯರು ಟೈಟಲ್ ನಲ್ಲಿ ಶರಣ್ ಅಭಿನಯಿಸುತ್ತಿದ್ದಾರೆ. ಈ ಟೈಟಲ್ ಅನ್ನು ಹಿರಿಯ ನಟ ದ್ವಾರಕೀಶ್ ಅನಾವರಣ ಮಾಡಿದ್ದಾರೆ.
ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕಿಷ್ಟು ಚಿತ್ರದ ಮಾಹಿತಿ ಹೊರಬಿದ್ದಿದ್ದು, ಇನ್ನುಳಿದಂತೆ ತಾಂತ್ರಿಕ ವರ್ಗ, ಕಲಾವಿದರು ಇತರ ವಿಷಯವನ್ನು ಇಷ್ಟರಲ್ಲೇ ಚಿತ್ರತಂಡ ಅನೌನ್ಸ್ ಮಾಡಲಿದೆ.
ವಿಡಿಯೋ ಲಿಂಕ್ https://m.youtube.com/watch?v=bB8WaxzPXS0&feature=youtu.be#dialog