ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಚಿತ್ರಕ್ಕೆ ಕಸ್ತೂರಿ ಆಗಿ ಶಾನ್ವಿ ಶ್ರೀವಾತ್ಸವ್ ಬಂದಿದ್ದು ನಿನ್ನೆ ಚಿತ್ರದ ಫಸ್ಟ್ಲುಕ್ ಕೂಡಾ ಬಿಡುಡೆಯಾಗಿದೆ. ಈ ಮೊದಲು ರಚಿತಾ ರಾಮ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದರು. ಚಿತ್ರದಿಂದ ಅವರು ಹೊರಹೋದ ನಂತರ ಹರಿಪ್ರಿಯಾ ಆ ಜಾಗಕ್ಕೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಗೆ ಶಾನ್ವಿ ಶ್ರೀವಾತ್ಸವ್ ಚಿತ್ರದ ನಾಯಕಿಯಾಗಿ ಬಂದಿದ್ದಾರೆ.
'ಕಸ್ತೂರಿ ಮಹಲ್' ಶಾನ್ವಿ ಶ್ರೀವಾತ್ಸವ್ ಫಸ್ಟ್ ಲುಕ್ ಬಿಡುಗಡೆ
'ಕಸ್ತೂರಿ ಮಹಲ್' ಚಿತ್ರದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ. ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸುತ್ತಿದ್ದು ಇದು ಅವರ 50 ನೇ ಚಿತ್ರವಾಗಿದೆ. ಅಕ್ಟೋಬರ್ 5 ರಿಂದ ಚಿತ್ರೀಕರಣ ಆರಂಭವಾಗಲಿದೆ.
ಚಿತ್ರದ ಕಥೆ ಬಹಳ ಇಷ್ಟವಾಯ್ತು ಆದ್ದರಿಂದ ಒಪ್ಪಿಕೊಂಡೆ ಎಂದು ಶಾನ್ವಿ ಹೇಳಿದ್ದಾರೆ. ಈ ಚಿತ್ರದ ಮುಹೂರ್ತದ ಸಮಯದಲ್ಲಿ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿತ್ತು. ನಂತರ 'ಕಸ್ತೂರಿ' ಎಂದು ಬದಲಾಯಿಸಲಾಯಿತು. ಕೊನೆಗೆ 'ಕಸ್ತೂರಿ ಮಹಲ್' ಎಂದು ನಾಮಕರಣ ಮಾಡಲಾಯ್ತು. ಅಕ್ಟೋಬರ್ 5 ರಿಂದ ಚಿತ್ರೀಕರಣ ಆರಂಭವಾಗಲಿದೆ. ಸದ್ಯಕ್ಕೆ ಚಿತ್ರಕ್ಕೆ ಸಂಗೀತ ಕೆಲಸಗಳು ನಡೆಯುತ್ತಿವೆ ಎಂದು ಸಂಗೀತ ನಿರ್ದೇಶಕ ಗೌತಮ್ ಶ್ರೀವಾತ್ಸವ್ ಹೇಳಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣವಿದೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ದಿನೇಶ್ ಬಾಬು ಅವರೇ ಬರೆದಿದ್ದಾರೆ. ರವೀಶ್ ಆರ್.ಸಿ ಚಿತ್ರದ ನಿರ್ಮಾಪಕರು. ಅಕ್ಷಯ್ ಸಿ.ಎಸ್ ಹಾಗೂ ನವೀನ್ ಆರ್.ಸಿ ಸಹ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದೆ. 'ಕಸ್ತೂರಿ ಮಹಲ್' ಶೀರ್ಷಿಕೆ ಕೆಳಗೆ 'ಎ ಫ್ರೇಗ್ನೆನ್ಸ್ ಫ್ರಮ್ ದಿ ಪಾಸ್ಟ್' ಎಂದು ಬರೆಯಲಾಗಿತ್ತು. ಒಟ್ಟಿನಲ್ಲಿ ಇದು ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವಾಗಿರುವುದರಿಂದ ಚಿತ್ರದ ಮೇಲೆ ಭರವಸೆ ಹೆಚ್ಚಾಗಿದೆ ಎಂದೇ ಹೇಳಬಹುದು.