ಮುಂಬೈ (ಮಹಾರಾಷ್ಟ್ರ): ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಅವರ ಬಿಗ್ ಬಾಸ್ ಪಾರ್ಟನರ್ ರಾಕೇಶ್ ಬಾಪಟ್ ತಮ್ಮ ಸಂಬಂಧ ಕೊನೆಗೊಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುದ್ದಿಗಳು ಹರಿದಾಡಿದ್ದವು.
ಆದರೆ, ನಟಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುವುದು ಸಾಬೀತಾಗಿದೆ. ಭಾನುವಾರ ರಾತ್ರಿ, 'ಹಲೋ! ಹಾಲ್ ಆಫ್ ಫೇಮ್ ಅವಾರ್ಡ್ಸ್ 2022' ಸಮಾರಂಭದಲ್ಲಿ ಈ ಎಲ್ಲ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
ಶಮಿತಾ ಮತ್ತು ರಾಕೇಶ್ ಅವರು ಮುಂಬೈನಲ್ಲಿ ಸ್ಟಾರ್- ಸ್ಟಡ್ಡ್ ಗಾಲಾದಲ್ಲಿ ರೆಡ್ ಕಾರ್ಪೆಟ್ ಮೇಲೆ ಫೋಟೋಗಳಿಗೆ ಫೋಸ್ ನೀಡುತ್ತಿರುವಾಗ ಕೈಗಳನ್ನು ಹಿಡಿದುಕೊಂಡು ಪರಸ್ಪರ ಕಣ್ಣುಗಳನ್ನು ನೋಡಿಕೊಂಡರು. ಈವೆಂಟ್‌ನಲ್ಲಿ ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಅವರ ಫೋಟೋಗಳಿಗೆ 'ಇಬ್ಬರೂ ಒಟ್ಟಿಗೆ ತುಂಬಾ ಮುದ್ದಾಗಿ ಕಾಣುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.