ಕರ್ನಾಟಕ

karnataka

ETV Bharat / sitara

'ಶಂಭೊ ಶಿವ ಶಂಕರ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ, ಚಿಟ್ಟೆ - Vasistha simha

ಶಂಕರ್ ಕೋನಮಾನಹಳ್ಳಿ ನಿರ್ದೇಶನದ 'ಶಂಭೊ ಶಿವಶಂಕರ' ಚಿತ್ರದ ಪೋಸ್ಟರನ್ನು ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ.

Shambho shivashankara Title released
'ಶಂಭೊ ಶಿವ ಶಂಕರ'

By

Published : Aug 17, 2020, 4:42 PM IST

ಕಳೆದ 15 ದಿನಗಳಿಂದ ಕನ್ನಡ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಎಷ್ಟೋ ಸಿನಿ ಕಾರ್ಮಿಕರಿಗೆ ಇದರಿಂದ ಬಹಳ ಸಂತೋಷವಾಗಿದೆ. ಶೂಟಿಂಗ್ ಆರಂಭಿಸಲು ಸರ್ಕಾರ ಅನುಮತಿ ನೀಡದಿದ್ದರೂ ಕೆಲವೊಂದು ಚಿತ್ರಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ.

'ಶಂಭೊ ಶಿವ ಶಂಕರ'

ಅಘನ್ಯ ಪಿಕ್ಚರ್ಸ್ ನಿರ್ಮಿಸುತ್ತಿರುವ 'ಶಂಭೊ ಶಿವಶಂಕರ' ಚಿತ್ರದ ಫಸ್ಟ್​​​ಲುಕ್ ಬಿಡುಗಡೆ ಆಗಿದೆ. ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಹಾಗೂ ರಾಜ್ಯದ ಇತರೆಡೆ ಚಿತ್ರೀಕರಣ ನಡೆಯಲಿದೆ. 'ಜನುಮದ ಜೋಡಿ' , 'ನಾಯಕಿ' ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಂಕರ್ ಅವರಿಗೆ ಇದು ಮೊದಲ ಚಿತ್ರ.

'ಶಂಭೊ ಶಿವ ಶಂಕರ' ಫಸ್ಟ್ ಲುಕ್

ಶಂಕರ್ ಕೋನಮಾನಹಳ್ಳಿಯವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗೌಸ್ ಪೀರ್​​​​ ಹಾಗೂ ಹಿತನ್ ದಾಸನ್ ಚಿತ್ರದ ಹಾಡುಗಳನ್ನು ಬರೆದಿದ್ದು ಹಿತನ್ ದಾಸನ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ , ವೆಂಕಟೇಶ್​ ಯುಡಿವಿ ಸಂಕಲನ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಇದೆ. 'ಪಂಚತಂತ್ರ' ನಾಯಕಿ ಸೊನಲ್ ಮೊಂಟೆರಿ 'ಶಂಭೊ ಶಿವಶಂಕರ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಮೂವರು ನಾಯಕರಿದ್ದಾರೆ.

ಧನಂಜಯ್, ವಸಿಷ್ಠ ಸಿಂಹ ಜೊತೆ 'ಶಂಭೊ ಶಿವ ಶಂಕರ' ತಂಡ

ABOUT THE AUTHOR

...view details