ಶೈಲಜಾನಾಗ್ ಪಕ್ಕಾ ಕಾರ್ಪೋರೇಟ್ ಶೈಲಿಯಲ್ಲಿ ಕೆಲಸ ನಿರ್ವಹಿಸಿರುವ ರೀತಿ ಸ್ವತಃ ದರ್ಶನ್ ಅವರಿಗೆ ಬಹಳ ಸಂತೋಷ ತಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಶೈಲಜಾನಾಗ್ 2014 ರಲ್ಲಿ ಸಿನಿಮಾ ಮಾಡಲು ಆಹ್ವಾನಿಸಿದ್ದರು. ಅಲ್ಲಿಂದ ಇಂದಿನವರೆಗೂ ದರ್ಶನ್ ತೋರಿದ ಕಾಳಜಿ, ಶ್ರದ್ಧೆ, ಪ್ರೋತ್ಸಾಹದಿಂದ ಶೈಲಜಾನಾಗ್ ಬಹಳ ಸಂತೋಷಗೊಂಡಿದ್ದಾರೆ.
ದರ್ಶನ್ ಇದ್ದರೆ ಎರಡು ಆನೆ ಬಲ ಇದ್ದಂತೆ ಅಂದ್ರು ಶೈಲಜಾನಾಗ್ - undefined
ದರ್ಶನ್ ಅಭಿನಯದ 'ಯಜಮಾನ ' ಸಿನಿಮಾ ಮಾರ್ಚ್ 1 ರಂದು ಬಿಡುಗಡೆಯಾಗುತ್ತಿದ್ದು ಮೊನ್ನೆ ಚಿತ್ರತಂಡ ಮಾಧ್ಯಮಗೋಷ್ಠಿ ಏರ್ಪಡಿಸಿತ್ತು. ನಿರ್ಮಾಪಕಿ ಶೈಲಜಾ ನಾಗ್ ದರ್ಶನ್ ಅವರನ್ನು ಹೊಗಳಿದರೆ, ಚಾಲೆಂಜಿಂಗ್ ಸ್ಟಾರ್, ಶೈಲಜಾ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
![ದರ್ಶನ್ ಇದ್ದರೆ ಎರಡು ಆನೆ ಬಲ ಇದ್ದಂತೆ ಅಂದ್ರು ಶೈಲಜಾನಾಗ್](https://etvbharatimages.akamaized.net/etvbharat/images/768-512-2506104-102-4d4e0a2f-53c3-4a0b-b6f9-1dee54058341.jpg)
ದರ್ಶನ್ ಇದ್ದರೆ ಎರಡು ಆನೆ ಬಲ ಇದ್ದಂತೆ ಎಂದು ಮೊನ್ನೆ ನಡೆದ ಯಜಮಾನ ಟ್ರೇಲರ್ ಹಾಗೂ ಪ್ರೆಸ್ಮೀಟ್ ಸಂದರ್ಭದಲ್ಲಿ ಶೈಲಜಾ ಹೇಳಿದ್ದಾರೆ. ‘ಯಜಮಾನ’ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ಬಿಡುಗಡೆ ಮಾಡುವ ಪ್ಲ್ಯಾನ್ ಹೊಂದಿದ್ದಾರೆ ಶೈಲಜಾನಾಗ್. ಗುರ್ಂಗಾವ್ ಹಾಗೂ ಆಂಧ್ರದಲ್ಲಿರುವ ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರಂತೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಕಲಾ ನಿರ್ದೇಶಕ ಶಶಿಧರ್ ಅಡಪ ಅವರನ್ನು ಕೂಡಾ ಶೈಲಜಾ ಕೊಂಡಾಡಿದ್ದಾರೆ.
ಇನ್ನು ದರ್ಶನ್ ಅವರಿಗೆ ಶೈಲಜಾನಾಗ್ ಅವರ ನಿರ್ಮಾಣ ಸಂಸ್ಥೆಯಿಂದ ಹೊಸ ಅನುಭವ ಸಿಕ್ಕಿದೆಯಂತೆ. ಶೈಲಜಾ ಅವರು ಬಹಳ ಚೆನ್ನಾಗಿ ಪ್ಲ್ಯಾನಿಂಗ್ ಮಾಡುತ್ತಾರೆ. ಸಾಮಾಜಿಕ ಜಾಲತಾಣ, ಅಭಿಮಾನಿಗಳ ಸಂಘ ಹಾಗೂ ಇತರರನ್ನು ಒಟ್ಟುಗೂಡಿಸಿ ಸಿನಿಮಾ ಪ್ರಮೋಷನ್ ಬಗ್ಗೆ ಶೈಲಜಾನಾಗ್ ಯೋಚಿಸುತ್ತಿರುವುದು ನಿಜಕ್ಕೂ ಇಂಪ್ರೆಸ್ಸಿವ್ ಆಗಿದೆ ಎಂದು ದರ್ಶನ್ ಹೇಳಿದ್ದಾರೆ.