ಮುಂಬೈನ ಲಾ ಥ್ರೋಬ್ ವಿಶ್ವವಿದ್ಯಾಲಯದ ವತಿಯಿಂದ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ವಿದ್ಯಾರ್ಥಿನಿವೋರ್ವಳಿಗೆ ಕೋಟ್ ಹಾಕಿಕೊಳ್ಳಲು ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟು ದೊಡ್ಡ ಸ್ಟಾರ್ ನಟರಾದರೂ ಕೂಡ ಯಾವ ಗರ್ವವಿಲ್ಲದೆ ವಿದ್ಯಾರ್ಥಿನಿಗೆ ಕೋಟ್ ತೊಡಿಸಿರುವುದು ನೆಟ್ಟಿಗರ ಮನ ಗೆದ್ದಿದೆ.
ಸಖತ್ ವೈರಲ್ ಆಗುತ್ತಿದೆ ಶಾರುಖ್ ಖಾನ್ ಅವರ ಈ ನಡೆ... ನೆಟ್ಟಿಗರ ಅಭಿಪ್ರಾಯವೇನು? - ಶಾರುಖ್ ಖಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ವಿದ್ಯಾರ್ಥಿನಿವೋರ್ವಳು ಕೋಟ್ ಹಾಕಿಕೊಳ್ಳಲು ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟು ದೊಡ್ಡ ಸ್ಟಾರ್ ನಟರಾದರೂ ಕೂಡ ಯಾವ ಗರ್ವವಿಲ್ಲದೆ ವಿದ್ಯಾರ್ಥಿನಿಗೆ ಕೋಟ್ ತೊಡಿಸಿರುವುದು ನೆಟ್ಟಿಗರ ಮನ ಗೆದ್ದಿದೆ.
ಸಖತ್ ವೈರಲ್ ಆಗುತ್ತಿದೆ ಶಾರುಖ್ ಈ ನಡೆ!
ಈ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಕೇರಳದ ಗೋಪಿಕಾ ಭಸಿ ಎನ್ನುವ ವಿದ್ಯಾರ್ಥಿನಿಗೆ 'ಶಾರುಖ್ ಖಾನ್ ಲಾ ಥ್ರೋಬ್ ಯೂನಿವರ್ಸಿಟಿ ಪಿಹೆಚ್ಡಿ ಸ್ಟಾಲರ್ಶಿಪ್' ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಗೆ ಸನ್ಮಾನ ಮಾಡಿ ಮಾತನಾಡಿದ ಶಾರುಖ್, ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಇನ್ನು ಗೋಪಿಕಾರನ್ನು ಓದಿಸುತ್ತಿರುವ ಪೋಷಕರಿಗೆ ಧನ್ಯವಾದಗಳು ಅಂತ ಶಾರುಖ್ ಹೇಳಿದ್ರು.