ಕರ್ನಾಟಕ

karnataka

ETV Bharat / sitara

ಮೇ 2ರಂದು ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ 'ಶ್ಯಾಡೋ' - ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಅಭಿನಯದ 'ಶ್ಯಾಡೋ' ಸಿನಿಮಾ ಮೇ 2ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

'Shadow' Cinema
ಮೇ 2ರಂದು ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ 'ಶ್ಯಾಡೊ' ಸಿನಿಮಾ

By

Published : Apr 30, 2021, 2:28 PM IST

ವಿನೋದ್ ಪ್ರಭಾಕರ್ ಅಭಿನಯದ 'ಶ್ಯಾಡೋ' ಸಿನಿಮಾ ಕಿರುತೆರೆಯಲ್ಲಿ ಪ್ರದರ್ಶನ ಕಾಣ್ತಿದೆ. ಫೆಬ್ರವರಿ 5ರಂದು ತೆರೆ ಕಂಡಿದ್ದ ಶ್ಯಾಡೋ ಸಿನಿಮಾ, ಮೇ 2ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಶ್ಯಾಡೋ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಪವರ್​ಫುಲ್ ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೆಳೆದಿತ್ತು. ಥಿಯೇಟರ್​​ಗಳಲ್ಲಿ ಸಿನಿಮಾ ಬಿಡುಗಡೆಯಾದ ಕೂಡಲೇ ಕನ್ನಡ ಸಿನಿ ಪ್ರೇಕ್ಷಕರು ಅಭೂತಪೂರ್ವವಾಗಿ ಈ ಚಿತ್ರವನ್ನು ಸ್ವಾಗತಿಸಿ ಬೆಂಬಲಿಸಿದರು.

ಇದರಲ್ಲಿ ಶ್ರೀಸಾಮಾನ್ಯನೊಬ್ಬ ತನ್ನ ನೆರಳು ತಪ್ಪಿ ಹೋಗಿದೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ. ಎಲ್ಲರನ್ನೂ ಈ ದೂರು ಗೊಂದಲದಲ್ಲಿ ಮುಳುಗಿಸುತ್ತದೆ. ಆದರೂ ಪೊಲೀಸರು ಈ ಕುರಿತು ತನಿಖೆ ನಡೆಸಲು ಪ್ರಾರಂಭಿಸುತ್ತಾರೆ. ಅದು ಸಂಭವನೀಯ ಹತ್ಯಾ ಪ್ರಯತ್ನವಾಗಿರುತ್ತದೆ. ಇದೊಂದು ರಿವೇಂಜ್ ಆ್ಯಕ್ಷನ್ ಚಿತ್ರವಾಗಿದ್ದು, ಪ್ರೀತಿ, ಕೌಟುಂಬಿಕ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಹೊಂದಿದೆ.

ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ ವಿನೋದ್ ಪ್ರಭಾಕರ್, ಹಿಂದಿ ಹಾಗೂ ಪಂಜಾಬಿ ಚಿತ್ರಗಳ ಖ್ಯಾತ ನಟಿ ಶೋಭಿತಾ ರಾಣಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಗೌಡ ನಿರ್ದೇಶನದ ಈ ಚಿತ್ರವನ್ನು ಚಕ್ರವರ್ತಿ ಸಿ.ಹೆಚ್. ನಿರ್ಮಿಸಿದ್ದಾರೆ.

ಓದಿ:ವಧುವಾದ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್.. ವಿಡಿಯೋ

ABOUT THE AUTHOR

...view details