ಕರ್ನಾಟಕ

karnataka

ETV Bharat / sitara

Raj Kundra Case: ಟ್ವಿಟರ್​​ನಲ್ಲಿ ಮಹತ್ವದ ಮಾಹಿತಿ ಹರಿಬಿಟ್ಟ ಶೆರ್ಲಿನ್ ಚೋಪ್ರಾ - ಅಶ್ಲೀಲ ವಿಡಿಯೋ ಕೇಸ್​

ಉದ್ಯಮಿ ರಾಜ್​ ಕುಂದ್ರಾ ಬಂಧನಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ಟ್ವಿಟರ್​ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

Raj Kundra Case
Raj Kundra Case

By

Published : Jul 22, 2021, 7:06 PM IST

ಮುಂಬೈ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್‌ ಕುಂದ್ರಾ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರ ಬಂಧನವಾಗಿದೆ. ಮಹಾರಾಷ್ಟ್ರ ಸೈಬರ್​ ಕ್ರೈಂ ಪೊಲೀಸರು ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ಶೆರ್ಲಿನ್​ ಚೋಪ್ರಾ ಟ್ವಿಟರ್​ನಲ್ಲಿ ಮಹತ್ವದ ವಿಡಿಯೋ ಹರಿಬಿಟ್ಟಿದ್ದಾರೆ.

ನನ್ನನ್ನು ವಯಸ್ಕ ಚಲನಚಿತ್ರೋದ್ಯಮಕ್ಕೆ ಕರೆತರುವಲ್ಲಿ ರಾಜ್​ ಕುಂದ್ರಾ ಕೈವಾಡವಿದೆ. ಪೂನಂ ಪಾಂಡೆ ಜೊತೆ ಕೂಡ ಅವರು ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. ರಾಜ್​ ಕುಂದ್ರಾ ಅವರ ಅನೇಕ ಪ್ರಾಜೆಕ್ಟ್​​​ಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಹೇಳಿಕೆ ನೀಡುವ ಮೊದಲ ಮಹಿಳೆ ನಾನು ಎಂದ ಶೆರ್ಲಿನ್​

ಕಳೆದ ಕೆಲ ದಿನಗಳಿಂದ ನನಗೆ ಕೆಲ ಪತ್ರಕರ್ತರು ನನಗೆ ಮೇಲಿಂದ ಮೇಲೆ ಫೋನ್​ ಮಾಡ್ತಿದ್ದು, ರಾಜ್​ ಕುಂದ್ರಾ ವಿಚಾರವಾಗಿ ಪ್ರಶ್ನೆ ಮಾಡ್ತಿದ್ದಾರೆ. ಅವರೆಲ್ಲರಿಗೂ ನಾನು ತಿಳಿಸುವುದು ಇಷ್ಟೇ. ಒಂದು ವೇಳೆ ಮಹಾರಾಷ್ಟ್ರ ಸೈಬರ್​ ಕ್ರೈಂನಿಂದ ನನಗೆ ನೋಟಿಸ್​​ ಬಂದರೆ ಅವರ ವಿರುದ್ಧವಾಗಿ ಹೇಳಿಕೆ ನೀಡುವ ಮೊದಲ ಮಹಿಳೆ ನಾನು ಎಂದಿದ್ದಾರೆ. 2021ರ ಮಾರ್ಚ್​ ತಿಂಗಳಲ್ಲಿ ನಾನು ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹೇಳಿಕೆ ಸಹ ದಾಖಲು ಮಾಡಿದ್ದೇನೆ ಎಂದು ನಟಿ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಉದ್ಯಮಿ ರಾಜ್​ ಕುಂದ್ರಾ ಬಂಧನ ಮಾಡಿರುವ ಮಹಾರಾಷ್ಟ್ರ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಇದೇ ಪ್ರಕರಣದಲ್ಲಿ ಸುಮಾರು 7 ಮಂದಿಯ ಬಂಧನ ಮಾಡಲಾಗಿದೆ. ನಾಳೆಯವರೆಗೂ ರಾಜ್​ ಕುಂದ್ರಾ ಅವರನ್ನ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿರುವ ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿ, ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ 'Adult film' ಮಾಡಲು ರಾಜ್‌ ಕುಂದ್ರಾ ಕಾರಣವಂತೆ!?

ABOUT THE AUTHOR

...view details