'ಪಾರು' ಧಾರವಾಹಿ ಖ್ಯಾತಿಯ ನಟಿ ಶಾಂಭವಿ ವೆಂಕಟೇಶ್ ಅವಳಿ ಮಕ್ಕಳಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸುವ ಮೂಲಕ ಶಾಂಭವಿ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ 'ಪಾರು' ಧಾರಾವಾಹಿ ನಟಿ ಶಾಂಭವಿ - Shambhavi Venkatesh
ಕಿರುತೆರೆ ನಟಿ ಶಾಂಭವಿ ವೆಂಕಟೇಶ್ ಅವಳಿ ಮಕ್ಕಳಿಗೆ ಜನ್ಮನೀಡಿದ್ದಾರೆ. ಸದ್ಯ ತಾಯ್ತನದ ಸಂಭ್ರದಲ್ಲಿರುವ ಅವರು ಕೆಜಿಎಫ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವಳಿ ಮಕ್ಕಳಿಗೆ ಜನ್ಮ ನೀಡಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. "ಹೆರಿಗೆ ಆಯ್ತಾ??? ಆಯ್ತಾ???… ಅಬ್ಬಾ ಎಷ್ಟೊಂದು ಸಂದೇಶಗಳು ಬಂದಿವೆ. ಹೌದು, ಆಯ್ತು. ತಡವಾಗಿ ತಿಳಿಸ್ತಾ ಇದ್ದೀನಿ ಕ್ಷಮೆ ಇರಲಿ. ನಿಮ್ಮೆಲ್ಲರ ಹಾರೈಕೆಯಂತೆ, ನಮ್ಮ ಕನಸು ಸಾಕಾರವಾಯ್ತು. ಜೂ. 4ಕ್ಕೆ ಅವಳಿ-ಜವಳಿ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡುವುದರೊಂದಿಗೆ ಅಪ್ಪ-ಅಮ್ಮನಾಗಿ ಬಡ್ತಿ ಪಡೆದಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಇರಲಿ" ಎಂದಿದ್ದಾರೆ.
ಕಿರುತೆರೆ ನಟಿ ಶಾಂಭವಿ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಪಾರು ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಶಾಂಭವಿ ಕಾಣಿಸಿಕೊಂಡಿದ್ದರು. ಪೈಲ್ವಾನ್ ಸಿನಿಮಾದಲ್ಲಿ ನಟಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು.