ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ಮೀರಾ ಹೆಗಡೆ ಪಾತ್ರಧಾರಿ ಮಾನಸ ಮನೋಹರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.
ಸೋಷಿಯಲ್ ಮೀಡಿಯಾದಲ್ಲಿ ಮೀರಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುವ ಮಾನಸ, ಇತ್ತೀಚೆಗಷ್ಟೆ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಕೆಂಪು ಲೆಹೆಂಗಾ ಧರಿಸಿ, ಪತಿಯೊಂದಿಗೆ ನಿಂತಿರುವ ಫೋಟೋ ಅಪ್ಲೋಡ್ ಮಾಡಿರುವ ಮೀರಾ, ‘ಮದುವೆಯಾಗಿ ಮೂರು ವರ್ಷವಾಯಿತು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಈ ಫೋಟೋ ನೋಡಿದ ಮಾನಸ ಅವರ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳಿಗೆ ಮಾನಸ ಅವರು ಮದುವೆಯಾಗಿರುವ ವಿಚಾರವೇ ತಿಳಿದಿಲ್ಲ. ಈ ಫೋಟೋ ನೋಡುತ್ತಿದ್ದಂತೆ ಕೆಲವರು “ನಿಮಗೆ ಮದುವೆಯಾಗಿದೆಯಾ” ಎಂದು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹಾರ್ಟ್ ಇಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.
ಮೀರಾ ಹೆಗಡೆ ಎಂದೇ ಪರಿಚಿತರಾದ ಮಾನಸ ಮಾನಸ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಅವರನ್ನು ಅಭಿಮಾನಿಗಳು ಮೀರಾ ಜೀ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಮಾನಸ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದರು. ಸದ್ಯ ಮಾನಸ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಯಾವುದೇ ಅಪ್ಡೇಟ್ಸ್ ನೀಡಿಲ್ಲ.