ನೂರು ಚಿತ್ರಗಳ ನಿರ್ದೇಶಕ ಓಂ ಸಾಯಿ ಪ್ರಕಾಶ್ ಸಾಮಾಜಿಕ ಕಳಕಳಿಯುಳ್ಳ 'ಸೆಪ್ಟೆಂಬರ್ 10' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಕೂಡಾ ಪೂರ್ಣಗೊಂಡಿದೆ. 'ಸೆಪ್ಟೆಂಬರ್ 10' ಆತ್ಮಹತ್ಯೆ ತಡೆಗಟ್ಟುವ ದಿನವಾಗಿದ್ದು ಇದೀಗ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಓಂ ಸಾಯಿಪ್ರಕಾಶ್ ನಿರ್ದೇಶನದ 'ಸೆಪ್ಟೆಂಬರ್ 10' ಡಬ್ಬಿಂಗ್ ಮುಕ್ತಾಯ - ಡಬ್ಬಿಂಗ್ ಮುಗಿಸಿದ ಸೆಪ್ಟೆಂಬರ್ 10 ಸಿನಿಮಾ
ಓಂ ಸಾಯಿ ಪ್ರಕಾಶ್ ನಿರ್ದೇಶನದ 'ಸೆಪ್ಟೆಂಬರ್ 10' ಸಿನಿಮಾ ಡಬ್ಬಿಂಗ್ ಪೂರ್ಣಗೊಂಡಿದೆ. ರೈತರ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ತೆಲಂಗಾಣದ ಕ್ಯಾಪ್ಟನ್ ಜಿ.ಜಿ. ರಾವ್ ಒಂದು ಪುಸ್ತಕ ಬರೆದು ಸರ್ಕಾರಕ್ಕೆ ನೀಡಿದ್ದರು. ಈ ಕಥೆಯನ್ನು ಆಧಾರವಾಗಿರಿಸಿಕೊಂಡು ಈ ಸಿನಿಮಾವನ್ನು ತಯಾರಿಸಲಾಗಿದೆ.
ಈ ಚಿತ್ರದಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ರೈತರ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ತೆಲಂಗಾಣದ ಕ್ಯಾಪ್ಟನ್ ಜಿ.ಜಿ. ರಾವ್ ಒಂದು ಪುಸ್ತಕ ಬರೆದು ಸರ್ಕಾರಕ್ಕೆ ನೀಡಿದ್ದರು. ಈ ಕಥೆಯನ್ನು ಆಧಾರವಾಗಿರಿಸಿಕೊಂಡು ಈ ಸಿನಿಮಾವನ್ನು ತಯಾರಿಸಲಾಗಿದೆ. ಹಿರಿಯ ನಟ ಶಶಿಕುಮಾರ್ ಈ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಆಗಿ ಅಭಿನಯಿಸಿದ್ದಾರೆ. ರಮೇಶ್ ಭಟ್ ವಕೀಲರಾಗಿ, ಸಿಹಿಕಹಿ ಚಂದ್ರು ಮುಸ್ಲಿಂ ಮುಖಂಡರಾಗಿ, ಶಿವಕುಮಾರ್ ಕ್ರಿಶ್ಚಿಯನ್ ಫಾದರ್ ಆಗಿ, ರವೀಂದ್ರನಾಥ್ ಪೊಲೀಸ್ ಅಧಿಕಾರಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಗಣೇಶ್ ರಾವ್ ಶ್ರೀಮಂತ ವ್ಯಾಪಾರಿ ಆಗಿ ಮತ್ತು ಇವರ ಜೊತೆ ಜಯಸಿಂಹ, ಆರಾಧ್ಯ, ಶ್ರೀನಿವಾಸ್, ವಿಜಯ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಮಾರುತಿ ಮಿರಾಜ್ಕರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ಜೆ.ಜಿ. ಕೃಷ್ಣ ಹಾಗೂ ಅವರ ಪುತ್ರ ದೀಪಕ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ. ಒಂದು ಚಿತ್ರಕ್ಕೆ ಅಪ್ಪ ಹಾಗೂ ಮಗ ಛಾಯಾಗ್ರಹಣ ಮಾಡಿರುವುದು ಇದೇ ಮೊದಲು.