ಕಳೆದ ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಲವಾರು ದೊಡ್ಡ ನಟರ ಸಿನಿಮಾಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಸ್. ಪ್ರಕಾಶ್ ಸೆಪ್ಟೆಂಬರ್ 10 ರಂದು ನಿಧನರಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಕೆ.ಎಸ್. ಪ್ರಕಾಶ್ ನಿಧನ - Production manager KS Prakash no more
ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಕೆ.ಎಸ್. ಪ್ರಕಾಶ್ ಸೆಪ್ಟೆಂಬರ್ 10 ರಂದು ನಿಧನರಾಗಿದ್ದಾರೆ. ಈ ವಿಚಾರ ತಡವಾಗಿ ಎಲ್ಲರಿಗೂ ತಿಳಿದಿದ್ದು ಪ್ರಕಾಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಕೆ.ಎಸ್. ಪ್ರಕಾಶ್ ಜೆ.ಪಿ. ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 10 ರಂದು ನಿಧನರಾಗಿದ್ದಾರೆ. ಪ್ರಕಾಶ್ ಸುಮಾರು 40 ವರ್ಷಗಳಿಂದ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಮೂಲತ: ರಂಗಭೂಮಿ ಕಲಾವಿದರಾಗಿರುವ ಪ್ರಕಾಶ್, ಅನೇಕ ನಾಟಕಗಳಲ್ಲಿ ಕೂಡಾ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗ ಈ ವರ್ಷ ಅನೇಕರನ್ನು ಕಳೆದುಕೊಂಡಿದೆ ಮೊನ್ನೆಯಷ್ಟೇ ಗೀತ ಸಾಹಿತಿ ತಂಗಾಳಿ ನಾಗರಾಜ್ ನಿಧನರಾಗಿದ್ದರು. ಇದೀಗ ಕೆ.ಎಸ್. ಪ್ರಕಾಶ್ ನಿಧನರಾಗಿರುವ ವಿಚಾರ ತಿಳಿದು ಚಿತ್ರರಂಗದ ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ.