ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಆನ್ಲೈನ್ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಇದೇ ವೇಳೆ ಚಿಕ್ಕಮಗಳೂರು ಮೂಲದ ಅರ್ಜುನ್ ಸಾಮ್ರಾಟ್ ಎಂಬುವವರು 'ವಿಸ್ತಾಸ್ ಲರ್ನಿಂಗ್ ಆ್ಯಪ್' ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ 99 ರೂ. ಹಾಗೂ 222 ರೂ.ಗಳ ದರದಲ್ಲಿ ಮಕ್ಕಳಿಗೆ ಲಭ್ಯವಿದೆ. ಈ ಆ್ಯಪ್ಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಪತ್ನಿ, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್ ರಾಯಭಾರಿಯಾಗಿದ್ದಾರೆ.
ವಿಸ್ತಾಸ್ ಲರ್ನಿಂಗ್ ಆ್ಯಪ್ನ ರಾಯಭಾರಿಯಾಗಿರುವ ಭಾರತಿ ವಿಷ್ಣುವರ್ಧನ್ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್ನ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ನನ್ನನ್ನು ಮೊದಲು ಆಕರ್ಷಿಸಿದ್ದು 'ವಿ' ಎನ್ನುವ ಪದ. ಅದರಲ್ಲಿ ತುಂಬಾ ಅರ್ಥಗಳಿವೆ. ವಿಷ್ಣುವರ್ಧನ್ ಅವರಿಗೆ ಎಜುಕೇಷನ್ ಬಗ್ಗೆ ತುಂಬಾ ಕಾಳಜಿಯಿತ್ತು. ತುಂಬಾ ಜನರಿಗೆ ಫೀಸ್ ಕಟ್ಟಲು ಸಹಾಯ ಮಾಡಿದ್ದರು. ನಾನು ಕೂಡ ಡಿಗ್ರಿ ಮಾಡಬೇಕು ಎಂದುಕೊಂಡಿದ್ದೆ, ಆಗಿರಲಿಲ್ಲ. ಮಧ್ಯಮ ವರ್ಗದ ಜನರಿಗೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿರುತ್ತದೆ. ದುಬಾರಿ ಶಿಕ್ಷಣದ ಕಾರಣದಿಂದ ಸಾಧ್ಯವಾಗಿರುವುದಿಲ್ಲ ಎಂದರು.