ಕೆಜಿಎಫ್ ಸಿನಿಮಾದ ಕಥೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅನಂತ್, ಕವಚ ಚಿತ್ರದಲ್ಲೂ ಶಿವಣ್ಣನ ಕಥೆ ಹೇಳಲಿದ್ದಾರೆ. ಈ ಸಿನಿಮಾ ಆರಂಭವನ್ನು ಅನಂತ್ ನಾಗ್ ಮಾಡಲಿದ್ದಾರಂತೆ. ಇಂದು ತಮ್ಮ ಮನೆಯಲ್ಲಿ ಈ ಸಿನಿಮಾದ ನಿರೂಪಣೆ ಮಾಡಿದ್ದಾರೆ. ಕೆಜಿಎಫ್ ಶೈಲಿಯಲ್ಲೇ ಚಿತ್ರಕಥೆ ರಿವೀಲ್ ಮಾಡಲಿದ್ದಾರಂತೆ.
'ಕವಚ'ದ ಕಥೆ ಹೇಳಲಿದ್ದಾರೆ ಎವರ್ ಗ್ರೀನ್ ಹೀರೋ ಅನಂತ್ ನಾಗ್! - undefined
'ಕವಚ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ ಸಿನಿಮಾ. ಸದ್ಯ ಟ್ರೇಲರ್ ಯೂ ಟ್ಯೂಬ್ನಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿದೆ. ಇದೀಗ ಎವರ್ ಗ್ರೀನ್ ಸ್ಮಾರ್ಟ್ ಹೀರೋ ಅನಂತ್ ನಾಗ್ ಕವಚ ಬಳಗಕ್ಕೆ ಸೇರಿಕೊಂಡಿದ್ದಾರೆ.
!['ಕವಚ'ದ ಕಥೆ ಹೇಳಲಿದ್ದಾರೆ ಎವರ್ ಗ್ರೀನ್ ಹೀರೋ ಅನಂತ್ ನಾಗ್!](https://etvbharatimages.akamaized.net/etvbharat/images/768-512-2750590-489-ff9c88b1-e91f-4cad-a17f-5f0d89c6a7e8.jpg)
ಹಿರಿಯ ನಟ ಅನಂತ್ ನಾಗ್
ಇನ್ನು 2016ರಲ್ಲಿ ತೆರೆ ಕಂಡಿದ್ದ ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಸಿನಿಮಾ ಕವಚ. ಜಿವಿಆರ್ ವಾಸು ನಿರ್ದೇಶನದ ಈ ಚಿತ್ರದಲ್ಲಿ ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ.