ವಿಭಿನ್ನ ಹೆಸರುಗಳನ್ನು ಇಟ್ಕೊಂಡು ಸಾಮಾಜಿಕ ಕಳಕಳಿ ಸಾರುವ ಸಿನಿಮಾಗಳಿಗೆ ಕನ್ನಡದಲ್ಲಿ ಬರವಿಲ್ಲ. ಇಂತಹದ್ದೇ ಕಾನ್ಸೆಪ್ಟ್ ಇಟ್ಕೊಂಡು ತೆರೆ ಮೇಲೆ ಬರಲು ಸಿನಿಮಾವೊಂದು ಸಿದ್ದವಾಗುತ್ತಿದೆ.
ಮುಂದಿನ ತಿಂಗಳು ಬಿಡುಗಡೆಗೆ ಸಿದ್ದವಾಗಿರುವ ‘ಸೆಲ್ಫಿ ಮಮ್ಮಿ -ಗೂಗಲ್ ಡ್ಯಾಡಿ’ ಸಿನಿಮಾ ಇಂದಿನ ಕಾಲದ ಮಕ್ಕಳ ಮೇಲೆ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಮಕ್ಕಳು ಹೇಗೆ ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ ಎಂಬ ಬಗ್ಗೆ ಹೇಳಲಾಗಿದೆ. ಅಲ್ಲದೇ ಇಂದಿನ ಮಕ್ಕಳು ಪಬ್ಜಿ, ಬ್ಲೂ ವೆಲ್ನಂತಹ ಆಟಗಳಿಗೆ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಹಿರಿಯರು ಹಾಗೂ ಶಿಕ್ಷಕರ ಮಾರ್ಗದರ್ಶವಿದ್ದು, ಮಕ್ಕಳು ಈ ದಾರಿಯಿಂದ ದೂರ ಇರುವಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶಕರು ವಿವರಿಸಿದ್ದಾರೆ.
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ! ಕೆಂಗೇರಿಯ ಸೇಂಟ್ ಬೆನಡಿಕ್ಟ್ ಶಾಲೆಯ ಆವರಣದಲ್ಲಿ ಮೊಬೈಲ್ ರೆಸ್ಟ್ ಡೆ ಆಚರಿಸಲಾಗಿದ್ದು, ಈ ವೇಳೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಯಕ್ರದ ಉದ್ಘಾಟನೆ ಮಾಡಿ ಚಿತ್ರದ ಟೀಸರ್ ರಿಲೀಸ್ ಮಾಡಿದ್ರು. ಈ ಕಾರ್ಯಕ್ರಮಕ್ಕೆ 50 ಕ್ಕೂ ಹೆಚ್ಚು ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳಿಂದ ನಡುಗೆ ಮಾಡಲಾಯಿತು.
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ! ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ! ಈ ಚಿತ್ರವನ್ನು ಮಧು ಚಂದ್ರ ನಿರ್ದೇಶನ ಮಾಡುತ್ತಿದ್ದು, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ದತ್ತಣ್ಣ, ಸುಂದರ್ ರಾಜ್, ಬೇಬಿಶ್ರೀ, ಮಾಸ್ಟರ್ ಆಲಾಪ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ!