ಅಮೆರಿಕದ ಸೆಲೀನಾ ಗೋಮೇಜ್ ನಟಿ, ಹಾಡುಗಾರ್ತಿ ಹಾಗು ನಿರ್ಮಾಪಕಿಯಾಗಿ ಹೆಸರಾದವರು.ಕೇವಲ 26 ನೇ ವಯಸ್ಸಿಗೆ ಇಷ್ಟರ ಮಟ್ಟಿಗೆ ಹೆಸರು ಸಂಪಾದಿಸಿದ ಈ ಪಾಪ್ ಸಿಂಗರ್ ಇದೀಗ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
68 ವರ್ಷದ ಸಹನಟ ಬಿಲ್ಮುರ್ರೆಯನ್ನು ಮದುವೆಯಾಗ್ತಿದ್ದಾರೆ ಸೆಲೀನಾ ಗೋಮೇಜ್! - undefined
26 ವರ್ಷದ ಹಾಲಿವುಡ್ ನಟಿ ಸೆಲೀನಾ ಗೋಮೇಜ್ ಇತ್ತೀಚೆಗೆ ಕಾನ್ಸ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಚಿತ್ರೋತ್ಸವದ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಸೆಲೀನಾ ನಾನು ಹಾಗೂ ಮುರ್ರೆ ವಿವಾಹವಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಫ್ರಾನ್ಸ್ನಲ್ಲಿ ಜರುಗುತ್ತಿರುವ ಕಾನ್ಸ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಸೆಲೀನಾ ತನ್ನ ಸಹನಟ 68 ವರ್ಷದ ಬಿಲ್ಮುರ್ರೆ ಅವರನ್ನು ಮದುವೆಯಾಗುತ್ತಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಇಬ್ಬರಿಗೂ 42 ವರ್ಷಗಳ ಅಂತರವಿದ್ದು ಈ ಸುದ್ದಿ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸೆಲೀನಾ ನಟನೆ 'ದಿ ಡೆಡ್ ಟೋಂಟ್ ಡೈ' ಸಿನಿಮಾ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ. ಈ ಸಿನಿಮಾದಲ್ಲಿ ಸೆಲೀನಾ ಹಾಗೂ ಬಿಲ್ ಮುರ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿರುವ ಸೆಲೀನಾ 'ಮೊದಲ ಬಾರಿ ಕೇನ್ಸ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದೆ, ಇದು ನನಗೆ ಮರೆಯಲಾರದ ಅನುಭವ, ಅಂದಹಾಗೆ ಮತ್ತೊಂದು ವಿಷಯ, ನಾನು ಹಾಗೂ ಮುರ್ರೆ ವಿವಾಹವಾಗುತ್ತಿದ್ದೇವೆ' ಎಂದು ಹೇಳಿಕೊಂಡಿದ್ದಾರೆ. ತನ್ನ ಮಾಜಿ ಪ್ರಿಯತಮ ಪಾಪ್ ಸ್ಟಾರ್ ಜಸ್ಟೀನ್ ಬೈಬರ್ ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಸೆಲೀನಾ ಕೋಪದಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ವಿಷಯ ಇದೀಗ ಹಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿದೆ.